ಜೇನುಮೇಳಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ  : ರೂ. 12 ಲಕ್ಷಕ್ಕೂ ಅಧಿಕ ವಹಿವಾಟು

ಕೊಪ್ಪಳ ನ. : ಕೊಪ್ಪಳ ತೋಟಗಾರಿಕೆ ಇಲಾಖೆ ವತಿಯಿಂದ ಕೊಪ್ಪಳದಲ್ಲಿ (ಅಕ್ಟೋಬರ್. 21 ರಿಂದ 25ರವರೆಗೆ) ಐದು ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದ ಜೇನು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಜಿಲ್ಲೆಯ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದ್ದು, ರೂ. 12 ಲಕ್ಷಕ್ಕೂ ಅಧಿಕ ವಹಿವಾಟಾಗಿದೆ. ರೈತರು ಹಾಗೂ ಗ್ರಾಹಕರ ಮನದಲ್ಲಿ ಅಚ್ಚಳಿಯದೇ ನಿಂತ ಜೇನು ಮೇಳ-2019, ಅಕ್ಟೋಬರ್. 21ರಂದು ಪ್ರಾರಂಭಗೊAಡು ಅ. 25 ರಂದು ತೆರೆ ಕಂಡಿತು.  ಪ್ರತಿ ವರ್ಷದಂತೆ ಈ ವರ್ಷವೂ ತೋಟಗಾರಿಕೆ ಇಲಾಖೆ (ಜಿ.ಪಂ) ಕೊಪ್ಪಳ ರವರಿಂದ ಜೇನು ಮೇಳ ಆಯೋಜಿಸಿದ್ದು, ಅಭೂತಪೂರ್ವ ಯಶ ಸಾಧಿಸಿದೆ.  ಮಳೆಯಲ್ಲೂ ಗ್ರಾಹಕರು, ರೈತರು ಹಾಗೂ ಜೇನು ಮಾರಾಟಗಾರರು ಉತ್ಸಾಹದಿಂದ ಪಾಲ್ಗೊಂಡಿದ್ದು, ಈ ಸಾರಿ ಜೇನು ಮೇಳದ ವಿಶೇಷವಾಗಿತ್ತು. ಈ ಸಾರಿ ಜೇನು ಮೇಳವನ್ನು ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿಗಳು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷö್ಮಣ ಸಂಗಪ್ಪ…

Read More