ಭಾರತ -ಸೌದಿ ಅರೇಬಿಯಾ ಭದ್ರತಾ ವಿಷಯಗಳ ಸಹಕಾರದಲ್ಲಿ ಉತ್ತಮ ಪ್ರಗತಿ: ಪ್ರಧಾನಿ ಮೋದಿ

ರಿಯಾದ್ , ಅ.29: ಭಾರತ ಮತ್ತು ಸೌದಿ ಅರೇಬಿಯಾ ತಮ್ಮ ನೆರೆಹೊರೆಯಲ್ಲಿ ಭದ್ರತಾ ಕಾಳಜಿಗಳನ್ನು ಹಂಚಿಕೊಳ್ಳುತ್ತವೆ ಮತ್ತು ಭಯೋತ್ಪಾದನೆ ನಿಗ್ರಹ ಸೇರಿದಂತೆ ಭದ್ರತಾ ವಿಷಯಗಳ ಬಗ್ಗೆ ಅವರ ಸಹಕಾರವು ಉತ್ತಮವಾಗಿ ಪ್ರಗತಿಯಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪ್ರಮುಖ ಹಣಕಾಸು ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಮತ್ತು ಸೌದಿಯ ಉನ್ನತ ನಾಯಕತ್ವದೊಂದಿಗೆ ಮಾತುಕತೆ ನಡೆಸಲು ಸೋಮವಾರ ರಾತ್ರಿ ಇಲ್ಲಿಗೆ ಆಗಮಿಸಿದ ಪ್ರಧಾನಿ ಮೋದಿ  ಮಂಗಳವಾರ ಅರಬ್  ನ್ಯೂಸ್ ಗೆ ನೀಡಿದ  ಸಂದರ್ಶನದಲ್ಲಿ ಈ ಹೇಳಿಕೆ ನೀಡಿದ್ದಾರೆ. “ಏಶ್ಯದ ಶಕ್ತಿಗಳಾದ ಭಾರತ ಮತ್ತು ಸೌದಿ ಅರೇಬಿಯಾಗಳು ತಮ್ಮ ನೆರೆಹೊರೆಯಲ್ಲಿ ಇದೇ ರೀತಿಯ ಭದ್ರತಾ ಕಾಳಜಿಗಳನ್ನು ಹಂಚಿಕೊಳ್ಳುತ್ತವೆ ಎಂದು ನಾನು ನಂಬುತ್ತೇನೆ” ಎಂದು ಮೋದಿ ಯಾವುದೇ ದೇಶವನ್ನು ಉಲ್ಲೇಖಿಸದೆ ಹೇಳಿದರು. ಸೌದಿ ಅರೇಬಿಯಾ ಪಾಕಿಸ್ತಾನದ ಪ್ರಮುಖ ಮಿತ್ರ ರಾಷ್ಟ್ರವಾಗಿದ್ದು, ಭಯೋತ್ಪಾದಕರಿಗೆ ಸುರಕ್ಷಿತ ತಾಣಗಳನ್ನು ಒದಗಿಸುತ್ತದೆ ಎಂದು ನೆರೆಹೊರೆಯ ದೇಶಗಳು ಆರೋಪಿಸಿದೆ. ಪಾಕಿಸ್ತಾನ…

Read More