ಮಹರ್ಷಿ ವಾಲ್ಮೀಕಿ ನಮ್ಮೆಲ್ಲರಿಗೂ ದಾರಿ ದೀಪವಾಗಿದ್ದಾರೆ : ಕರಡಿ ಸಂಗಣ್ಣ

ಕೊಪ್ಪಳ ಅ. ): ಮಹರ್ಷಿ ವಾಲ್ಮೀಕಿರವರು ಸಮೃದ್ಧ ಪುಣ್ಯ ಪುರಷರಾಗಿದ್ದು, ನಮ್ಮೆಲ್ಲರಿಗೂ ದಾರಿ ದೀಪವಾಗಿದ್ದಾರೆ ಎಂದು ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ಹೇಳಿದರು.   ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಅಂಗವಾಗಿ ನಗರದ ಸಾಹಿತ್ಯ ಭವನದಲ್ಲಿ ಶನಿವಾರದಂದು ಹಮ್ಮಿಕೊಳ್ಳಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  ಸಮಾಜವನ್ನು ಸುಧಾರಿಸುವ ನಿಟ್ಟಿನಲ್ಲಿ ವಾಲ್ಮೀಕಿಯ ಕೆಲಸ ಅಪಾರವಾದದ್ದು, ಇವತ್ತಿನ ಅನೇಕ ಕವಿಗಳು ಪ್ರಖ್ಯಾತರಾಗಿರುವದಕ್ಕೆ ವಾಲ್ಮೀಕಿ ರಾಮಾಯಣ ಮಹಾಕಾವ್ಯ ಪ್ರೆÃರಣೆಯಾಗಿದೆ.  ರಾಮಾಯಣದ ಮೂಲಕ ನೈತಿಕ ಸಂವಿಧಾನದ ತಳಹದಿ ಹಾಕಿಕೊಟ್ಟಿದ್ದು ಮಹರ್ಷಿ ವಾಲ್ಮೀಕಿ, ಈ ಕೃತಿ ಅನೇಕ ಸಾಧಕರಿಗೆ ಮಾರ್ಗಸೂಚಿಯಾಗಿದೆ.  ವಾಲ್ಮೀಕಿ ರಾಮಾಯಣವು ಜನಸಾಮಾನ್ಯರ ಬದುಕಿಗೆ ಬೆಳಕಾಗಿದೆ.  ಒಬ್ಬ ಸಾಮಾನ್ಯ ವ್ಯಕ್ತಿ ಸುಸಂಸ್ಕೃತನಾಗುತ್ತಾನೆ ಹಾಗೂ ಮಹರ್ಷಿಯಾಗುತ್ತಾನೆ ಎಂಬುವುದಕ್ಕೆ ಮಹರ್ಷಿ ವಾಲ್ಮಿÃಕಿಯವರೇ ವಿಶೇಷ ಉದಾಹರಣೆ.  ಬಾಲ್ಯದಲ್ಲಿ ನಾದರಿಂದ ಬೋಧನೆಪಡೆದಿರುತ್ತಾರೆ.  ಇವರು ಶಬ್ಧವೇದಿ ವಿದ್ಯೆಯನ್ನು ಬಲ್ಲವರಾಗಿದ್ದರು.  ಇಂತಹ ಮಹಾನಿಯರನ್ನು…

Read More