ಶಾಸಕರಿಂದ ಹಿಂಗಾರು ಬಿತ್ತನೆ ನೀಜ ವಿತರಣೆ

ಕೊಪ್ಪಳ:೩೦, ಅಳವಂಡಿ ಗ್ರಾಮದಲ್ಲಿ ೨೦೧೯-೨೦ನೇ ಸಾಲಿನ ಹಿಂಗಾರು ಬಿತ್ತನೆ ಬೀಜ ವಿತರಣೆ ಮಾಡಿ ಬಳಿಕ ಮಾತನಾಡಿದ ಶಾಸಕ .ಕೆ.ರಾಘವೇಂದ್ರ ಹಿಟ್ನಾಳರವರು, ಪ್ರತಿಯೊಬ್ಬ ರೈತನು ತಮ್ಮ ಬೆಳೆಯ ವಿಮೆಯನ್ನು ಕಡ್ಡಾಯವಾಗಿ ಮಾಡಿಸ ಬೇಕು ಪ್ರಕೃತಿ ವಿಕೋಪದಿಂದ ಉಂಟಾಗುವ ಹಾನಿಗಳಿಂದ ಬೆಳೆಗಳು ನಾಶವಾದಾಗ ರೈತರು ತೀರ್ವ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಾರೆ. ಅದಕ್ಕಾಗಿ ಚಾಚುತಪ್ಪದೆ ಬೆಳೆ ವಿಮೆ ಮಾಡಿಸಬೇಕು. ೧ ಲಕ್ಷ ೩೫ ಸಾವಿರ ಏಕರೆ ಭೂಮಿಗೆ ಕೃಷಿ ಇಲಾಖೆಯಿಂದ ಬೀಜ ಗೊಬ್ಬರದ ಸವಲತ್ತು ಕಲ್ಪಿಸಲಾಗುತ್ತಿದ್ದು, ರೈತರು ತಮ್ಮ ಭೂಮಿಯ ಮಣ್ಣಿನ ಗುಣಮಟ್ಟವನ್ನು ಪರೀಕ್ಷಿಸಿ ಫಲವತ್ತತೆ ಪಡೆಯಲು ಯಾವ ಬೆಳೆ ಬೆಳೆಯಲು ಸೂಕ್ತವೆಂದು ನಿರ್ದರಿಸಬೇಕು. ಕಡಿಮೆ ಖರ್ಚಿನಲ್ಲಿ ಲಾಭದಾಯಕ ಬೆಳೆಗನ್ನು ಬೆಳೆದು ಆರ್ಥಿಕವಾಗಿ ಸದೃಡರಾಗಬೇಕು. ಈ ಭಾಗದ ನೀರಾವರಿ ಸೌಲಭ್ಯಕ್ಕೆ ಹೆಚ್ಚು ಒತ್ತುಕೊಟ್ಟು ಸಿಂಟಾಲೂರು ಏತನೀರಾವರಿ ಯೋಜನೆಯಿಂದ ರೂ.೧೯ ಕೋಟಿ ವೆಚ್ಚದಲ್ಲಿ ೧೩ ಏಕರೆಗಳನ್ನು ತುಂಬಿಸಿ ಅಂತರ್ಜಲಮಟ್ಟ ಹೆಚ್ಚಿಸಲಾಗುವುದು. ಎನ್.ಆರ್.ಜಿ. ಯೋಜನೆ…

Read More