ದಲಿತ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಖಂಡಿಸಿ ಧರಣಿ ಪ್ರತಿಭಟನೆ

ಕೊಪ್ಪಳ. ಸೆ:೩೦: ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಅಸಂತಾಪುರ ಗ್ರಾಮದ ದಲಿತ ಯುವತಿ ರೇಣುಕಾ ತಂದೆ ಭೀಮಪ್ಪ ಮಾದರ ಪಿ.ಯು.ಸಿ. ಪ್ರಥಮ ವರ್ಷದ ತರಗತಿಯಲ್ಲಿ ಓದುತ್ತಿದ್ದು, ಕಂಪ್ಯೂಟರ ತರಬೇತಿಗಾಗಿ ಸಿಂದಗಿಗೆ ಹೋಗಿ ಬರುವಾಗ ಬಸ್ಸಿನಿಂದ ಇಳಿಸಿ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಘಟನೆ ಭಯಭೀತಿಯನ್ನುಂಟು ಮಾಡಿದೆ. ದಲಿತರು ಅದರಲ್ಲಿಯೂ ಮಹಿಳೆಯರು ಓದಲು ಪರ ಊರಿಗೆ ಹೋಗದಂತ ಪರಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ವಿವಿಧ ದಲಿತ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಅರ್ಪಿಸಿದರು. ಮನವಿಯಲ್ಲಿ ಅತ್ಯಾಚಾರ ಕೊಲೆ ಮಾಡಿದವರು ಯಾರೇ ಇರಲಿ ಅವರನ್ನು ಬಂಧಿಸಿ ಪ್ರಕರಣ ದಾಖಲಿಸಿ ಶಿಕ್ಷೆ ಸಿಗುವಂತೆ ಮಾಡದೆ ಹೋದರೆ ಇಂತಹ ಅತ್ಯಾಚಾರ ಕೊಲೆ ಪ್ರಕರಣಗಳಿಗೆ ತೆರೆ ಎಳೆಯುವದು ಸಾಧ್ಯವಿಲ್ಲ. ಈ ಘಟನೆಯನ್ನು ಕೊಪ್ಪಳದ ಪ್ರಗತಿಪರ ಸಂಘಟನೆಗಳ ಒಕ್ಕೂಟವು ಉಗ್ರವಾಗಿ ಖಂಡಿಸಿ ದಿ: ೩೦-೦೯-೨೦೧೯…

Read More