ದೇವಸ್ಥಾನದ ಜಾಗೆ, ಇತರೆ ಆಸ್ತಿಗಳ ಸಂರಕ್ಷಣೆಗೆ ಮುಂದಾಗಿ : ಪಿ.ಸುನೀಲ್ ಕುಮಾರ್

ಕನಕಗಿರಿ ಶ್ರಿಕನಕಾಚಲಪತಿ ದೇವಸ್ಥಾನದ ಸಮಗ್ರ ಅಭಿವೃದ್ಧಿ ಕುರಿತು ಸಭೆ ಕೊಪ್ಪಳ ಸೆ  ಕೊಪ್ಪಳ ಜಿಲ್ಲೆಯ ಕನಕಗಿರಿ ಶ್ರಿÃ ಕನಕಾಚಲಪತಿ ದೇವಸ್ಥಾನದ ಜಾಗೆಗಳು ಹಾಗೂ ಇತರೆ ಆಸ್ತಿಗಳನ್ನು ಸಂರಕ್ಷಿಸಲು ಮತ್ತು ದೇವಸ್ಥಾನದ ಸುತ್ತಲು ಇರುವ ಪ್ರದೇಶಗಳನ್ನು ನಿಗದಿಪಡಿಸಿ ಹದ್ದು-ಬಸ್ತು ಮಾಡಲು ಸರ್ವೇ ಮಾಡಿಸಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲೆಯ ಕನಕಗಿರಿ ತಾಲ್ಲೂಕಿನ ಶ್ರಿÃ ಕನಕಾಚಲಪತಿ ದೇವಸ್ಥಾನದ ಸಮಗ್ರ ಅಭಿವೃದ್ಧಿ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು (ಸೆ.21) ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶ್ರಿÃ ಕನಕಾಚಲಪತಿ ದೇವಸ್ಥಾನದ ದೇವಸ್ಥಾನಕ್ಕೆ ಸೇರಿದ ರಥಕ್ಕೆ ತ್ವರಿತವಾಗಿ ಅಚ್ಚುಗಳು ಮತ್ತು ಗಾಲಿಗಳು ಹೊಸದಾಗಿ ನಿರ್ಮಾಣ ಮಾಡಬೇಕು.  ರಾಜ್ಯ ಪುರಾತತ್ವ ಇಲಾಖೆಯಿಂದ ಕೈಪಿಡಿ ಹಾಗೂ ಗೋಪುರಗಳ ನವೀರಕಣ ಮತ್ತು ಕೈಪಿಡಿ ಗೊಂಬೆಗಳನ್ನು ಪುನರ್ ನಿರ್ಮಾಣ ಮಾಡಲು ರಾಜ್ಯ ಪುರಾತತ್ವ ಇಲಾಖೆ ಯಿಂದ ಅಂದಾಜು ಪಟ್ಟಿ…

Read More