ಮನುಷ್ಯ ಸತ್ತ 1 ವರ್ಷಕ್ಕೂ ಹೆಚ್ಚು ಕಾಲ ದೇಹದಲ್ಲಿ ಚಲನೆ: ಆಸ್ಟ್ರೇಲಿಯಾ ವಿಜ್ಞಾನಿ

ಸಿಡ್ನಿ, ಸೆ.13: ಮನುಷ್ಯರು ಸತ್ತ ನಂತರವೂ ಅವರ ಕಳೇಬರಗಳು ಒಂದು ವರ್ಷಕ್ಕೂ ಹೆಚ್ಚು ಕಾಲ ಚಲನೆಗಳಿರುತ್ತವೆ ಎಂಬುದನ್ನು ಆಸ್ಟ್ರೇಲಿಯಾದ ವಿಜ್ಞಾನಿ ಅಲಿಸನ್ ವಿಲ್ಸನ್ ಪ್ರತಿಪಾದಿಸಿದ್ದಾರೆ. ಸುಮಾರು 17 ತಿಂಗಳುಗಳಿಗೂ ಹೆಚ್ಚಿನ ಕಾಲ ಕಳೇಬರವೊಂದನ ಚಲನೆಗಳನ್ನು ಅಭ್ಯಸಿಸಿ ಹಾಗೂ ಅದರ ಛಾಯಾಚಿತ್ರಗಳನ್ನು ತೆಗೆದಿರುವ ಈಕೆ ಮನುಷ್ಯರು ಮೃತಪಟ್ಟು ಒಂದು ವರ್ಷದ ತನಕ  ನಿಜಾರ್ಥದಲ್ಲಿ ಅವರ ದೇಹ ಶಾಂತಿಯಿಂದಿರುವುದಿಲ್ಲ ಎಂದರು. ಒಂದು ಪ್ರಕರಣದಲ್ಲಿ ಮೃತದೇಹದ ತೀರಾ ಸನಿಹದಲ್ಲಿದ್ದ ಕೈಗಳು ಒಂದು ಬದಿಗೆ ಚಾಚಿಕೊಂಡಿದ್ದವು. ದೇಹ ಕೊಳೆತು ಹೋಗುವ ಹಂತದಲ್ಲಿ ಈ ಚಲನೆಗಳು ನಡೆಯುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ. ತಮ್ಮ ಅಧ್ಯಯನದ ಭಾಗವಾಗಿ ಒಂದು ನಿರ್ದಿಷ್ಟ ಕಳೇಬರವನ್ನು ಪರೀಕ್ಷಿಸಲು ಅವರು ಪ್ರತಿ ತಿಂಗಳು ಕೈನ್ರ್ಸ್ ನಿಂದ ಸಿಡ್ನಿಗೆ ಆಗಮಿಸುತ್ತಿದ್ದರು. ಸಿಡ್ನಿಯ ಹೊರವಲಯದಲ್ಲಿರುವ ರಹಸ್ಯ ಸ್ಥಳವೊಂದರಲ್ಲಿರುವ `ಬಾಡಿ ಫಾರ್ಮ್’ ಎಂದೇ ಕರೆಯಲ್ಪಡುವ ಆಸ್ಟ್ರೇಲಿಯನ್ ಫೆಸಿಲಿಟಿ ಫಾರ್ ಟೆಫೊನೋಮಿಕ್ ಎಕ್ಸ್‍ಪರಿಮೆಂಟಲ್ ರಿಸರ್ಚ್ ನಲ್ಲಿ…

Read More