ಕಲಾ ವೈಭವದಲ್ಲಿ ಮಿಂದೆದ್ದ ಕಲಾ ಅಭಿಮಾನಿಗಳು

ಕೊಪ್ಪಳ : ಭಾಗ್ಯನಗರದ ಖೋಡೆ ಕಲ್ಯಾಣ ಮಂಟಪದಲ್ಲಿ ಸ್ವರ ಸೌರಭ ಸಂಗೀತ ಮತ್ತು ಲಲಿತಕಲಾ ಸಂಸ್ಥೆ ಭಾಗ್ಯನಗರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕಲಾವೈಭವ ಕಾರ್ಯಕ್ರಮ ನೆರದಿದ್ದ ಕಲಾಭಿಮಾನಿಗಳನ್ನು ಹೆಸರಿಗೆ ತಕ್ಕಂತೆ ಕಲಾ ವೈಭವದಲ್ಲಿ ತೇಲಾಡುವಂತೆ ಕಲಾವಿದರ ಪ್ರಸ್ತುತಿಗಳು ಬಹು ಸುಂದರವಾಗಿ ಮೂಡಿ ಬಂದವು. ಕಾರ್ಯಕ್ರಮದಲ್ಲಿ ಮೆಹಬೂಬಸಾಬರ ಮಧುಕೌಂಸ್ ರಾಗವು ಶಾಸ್ತ್ರೀಯ ಸಂಗೀತದ ಅಭಿರುಚಿಯನ್ನು ಹೆಚ್ಚುವಂತೆ ಮಾಡಿತು. ಸದಾಶಿವ ಪಾಟೀಲ್‌ರ ಸುಗಮ ಸಂಗೀತ, ಗಣೇಶ ರಾಯಭಾಗಿಯವರ ವಚನ ಸಂಗೀತ, ವಿಜಯಲಕ್ಷ್ಮೀ ನಾಗರಾಜರವರ ಭಾವಗೀತೆ, ಯುವರಾಜ ಹಿರೇಮಠರವರ ಜಾನಪದ, ಭೂಮಿಕಾ ಗಡಾದ ಕೀರ್ತಿ ಮೇಟಿ ಹಾಗೂ ಆರತಿ ಮೇಟಿ ಯವರ ಭಕ್ತಿ ಗೀತೆಗಳು ಜನರ ಮನಸೂರೆಗೊಂಡವು. ರಾಮಚಂದ್ರಪ್ಪ ಉಪ್ಪಾರರ ಹಾರ್ಮೋನಿಯಂ ವಾದನ ಅತ್ಯಂತ ರಂಜನೀಯವಾಗಿತ್ತು. ಹಾಗೂ ಕಾರ್ಯಕ್ರಮದ ನಡುವೆ ದೀಕ್ಷಾ ನಾಟ್ಯ ಕಲಾ ಸಂಸ್ಥೆಯ ವಿವಿಧ ಬಗೆಯ ಭರತನಾಟ್ಯದ ಪ್ರಸ್ತುತಿಗಳು ಕಲಾಭಿಮಾನಿಗಳನ್ನು…

Read More