ಅವೈಜ್ಞಾನಿಕ ದುಬಾರಿದಂಡ / ಕೇಂದ್ರ ಮೋಟಾರ್ ವಾಹನ ಮಸೂದೆ-೨೦೧೯ ತಿದ್ದುಪಡಿ ವಾಪಾಸಾತಿಗಾಗಿ ಮನವಿ

ಅವೈಜ್ಞಾನಿಕ ದುಬಾರಿದಂಡ / ಕೇಂದ್ರ ಮೋಟಾರ್ ವಾಹನ ಮಸೂದೆ-೨೦೧೯  ತಿದ್ದುಪಡಿ ವಾಪಾಸಾತಿಗಾಗಿ ಹಾಗೂ ಆಟೋ ಚಾಲಕರಿಗೆ ಕಲ್ಯಾಣ ಯೋಜನೆಗಳನ್ನು  ರೂಪಿಸಿ ಜಾರಿಗಾಗಿ ಒತ್ತಾಯಿಸಿ ಮನವಿ ಪತ್ರ. ಆಟೋ ಚಾಲಕರು ೬೯ ವರ್ಷದಿಂದ ಸಾರ್ವಜನಿಕ ಸೇವೆಯಲ್ಲಿ ಸಾರಿಗೆ ವ್ಯವಸ್ಥೆಯಲ್ಲಿ ಎರಡನೇ ಸ್ಥಾನದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಆದರೆ ಇವರಿಗೆ ಸರ್ಕಾರದಿಂದ ಯಾವುದೇ ರೀತಿಯಾದಂತಹ ಸೌಲಭ್ಯಗಳನ್ನು ನೀಡದೆ ವಂಚಿಸುತ್ತಾ ಬರುತ್ತಿದ್ದಾರೆ. ಆದರೆ ಇವರಿಂದ ಸರ್ಕಾರಗಳು ಕೋಟ್ಯಾಂತರ ರೂ.ಗಳ ತೆರಿಗೆಯನ್ನು ಸಂಗ್ರಹಿಸುತ್ತಿದ್ದಾರೆ. ಆಟೋ ಚಾಲಕರಿಗೆ ವಾಸಿಸಲು ಮನೆ / ಉತ್ತಮ ವೈದ್ಯಕೀಯ ಸೌಲಭ್ಯ, ವೃದ್ಧಾಪ್ಯ ಸಮಯದಲ್ಲಿ ಕನಿಷ್ಟ` ಪಿಂಚಣಿ ಸೌಲಭ್ಯ / ಮಕ್ಕಳ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿ ವೇತನಗಳನ್ನು ನೀಡದೆ ಯೋಜನೆಗಳನ್ನು ರೂಪಿಸದೇ ಆಟೋ ಚಾಲಕರನ್ನು ವಂಚಿಸುತ್ತಾ ಬಂದಿವೆ. ಈಗಲಾದರು ಸಹ ಸರ್ಕಾರವು ಆಟೋ ಚಾಲಕರ ಬೇಡಿಕೆಗಳ ಬಗ್ಗೆ ಯೋಜನೆಗಳನ್ನು ರೂಪಿಸಲು ಸಂಘವು ಮನವಿ ಮಾಡುತ್ತದೆ. ೧. ಅವೈಜ್ಞಾನಿಕ ದುಬಾರಿ ದಂಡ ಹಾಗೂ ಕೇಂದ್ರ…

Read More