ರಾಜ್ಯ ರಾಜಕಾರಣದ ಅಪರೂಪದ ಸಾಕ್ಷಿಪ್ರಜ್ಞೆ: ಎ.ಕೆ.ಸುಬ್ಬಯ್ಯ  – ದೇವು ಪತ್ತಾರ

ತಮ್ಮ ಪ್ರಖರ ಮಾತಿನ ವೈಖರಿಯಿಂದ ಗಮನ ಸೆಳೆಯುತ್ತಿದ್ದ ಸುಬ್ಬಯ್ಯ ಹೋರಾಟ, ಪ್ರಾಮಾಣಿಕತೆ, ಜಾತ್ಯತೀತ ಮೌಲ್ಯಗಳ ಪ್ರತೀಕದಂತಿದ್ದರು. ಮಾತಿನ ಮನೆಯನ್ನು ಮಾತಿನ ಮೂಲಕವೇ ವಶಕ್ಕೆ ಪಡೆದ ಸುಬ್ಬಯ್ಯ ತರಹದ ನಾಯಕರು ಅಪರೂಪ. ನಾಲ್ಕು ಬಾರಿ ಮೇಲ್ಮನೆ ಸದಸ್ಯರಾಗಿದ್ದ ಸುಬ್ಬಯ್ಯ ಅವರು ಆಡಲು ನಿಂತರೆ ಆಡಳಿತ ಪಕ್ಷದವರಿಗೆ ಆತಂಕ, ಗಾಬರಿ ಉಂಟಾಗುತ್ತಿತ್ತು. ಸದಾ ವಿರೋಧ ಪಕ್ಷದವರಾಗಿಯೇ ಇರಲು ಬಯಸಿದ ಸುಬ್ಬಯ್ಯ ಬಯಸಿದ್ದರೆ ‘ಅಧಿಕಾರ’ ಅವರಿಂದ ದೂರ ಉಳಿಯುತ್ತಿರಲಿಲ್ಲ. ಹಲವು ಬಾರಿ ಅಧಿಕಾರ ಅವರ ಸಮೀಪ ಬಂದು ಹೋದದ್ದಿದೆ. ಅವರು ಅದಕ್ಕಾಗಿ ಆಸೆ ಪಟ್ಟವರಲ್ಲ. ಆಡಳಿತಾರೂಢ ಪಕ್ಷದ ಲೋಪ ಎತ್ತಿ ತೋರಿಸುವ ಯಾವ ಅವಕಾಶವನ್ನೂ ಸುಬ್ಬಯ್ಯ ಕೈ ಬಿಡುತ್ತಿರಲಿಲ್ಲ. ಮಾತಿನ ಚಟಾಕಿಯ ಮೂಲಕ ತಿವಿಯುತ್ತಿದ್ದರು. ಪ್ರಭುತ್ವದ ಅರೆಕೊರೆಗಳನ್ನು ಅವರ ಹಾಗೆ ದಾಖಲಿಸಿದವರು ವಿರಳ. ಕಾನೂನು ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿಯೇ ರಾಜಕೀಯದ ರುಚಿ ಕಂಡವರು ಸುಬ್ಬಯ್ಯ. ಪ್ರಬಲ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ಸ್ಪರ್ಧಿಸಿದ್ದ ಪ್ರಜಾ…

Read More