​ನಮ್ಮ ಅಂಬಿಯ ಮೊದಲ ಪ್ರೇಮಪ್ರಸಂಗ….. ಮಲ್ಲಿಕಾರ್ಜುನ ಕೊತಬಾಳ

ನಮ್ಮಣ್ಣನ ಗಂಗಾ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ದಿನಾಲೂ ನೀರು ಒಯ್ಯಲು ಬರುತ್ತಿದ್ದ ಯುವ ಮೇಷ್ಟ್ರು ಒಬ್ಬರು ವಾರದ ಹಿಂದೆ ಘಟಕಕ್ಕೆ ಹೊಂದಿಕೊಂಡೇ ಇರುವ ನಮ್ಮ ಮನೆ ಬಾಗಿಲಿಗೆ ಬಂದು “ಚಿನ್ನದಂತ ಹುಡುಗಿಗೆ ಮುತ್ತಿನಂತ ಹುಡುಗ ಬೇಕು.. ನಮ್ಮ ಬೀಗರಾಗಲು.. ಒಪ್ಪಿಗೆಯೇ.. ಒಪ್ಪಿಗೆಯೇ..” ಎನ್ನುತ್ತಾ ಒಳಗೆ ಬಂದರು. ಅವರ ಮನೆಯ ರಾಣಿಗೆ ನಮ್ಮ ಅಂಬಿಯ ಜೊತೆ ಸಂಬಂಧದ ಪ್ರಸ್ತಾವ ಇಟ್ಟರು. ನಾವು ಎಷ್ಟಾದರೂ ಗಂಡಿನ ಕಡೆಯವರಲ್ಲವೇ, ಸ್ವಲ್ಪ ಬಿಗುಮಾನದಿಂದಲೇ ನಾವು ಹುಡುಗಿಯನ್ನ ನೋಡಬೇಕು, ನಮ್ಮ ಹುಡುಗನ ಕುಲ ಲ್ಯಾಬ್ರಾಡರ್ ರಿಟ್ರೈವರ್. ಅವಳ ಕುಲಗೋತ್ರ ಯಾವುದು? ಆರೋಗ್ಯ ಹೇಗಿದೆ? ಎಲ್ಲ ಅಗತ್ಯ ಲಸಿಕೆಗಳನ್ನು ನಿಯಮಾನುಸಾರ ಹಾಕಿಸಿದ್ದೀರಾ? ಎಂದೆಲ್ಲ ಕೇಳಿದೆ. ಅವರು ಸ್ವಲ್ಪ ಸಂಕೋಚ ಮತ್ತು ಅಷ್ಟೇ ಸಮಾಧಾನದಿಂದ ಹೌದೆಂದೂ, ನಾನು ನಿಮ್ಮ ಅಂಬಿಯನ್ನು ಅದರ ಬಾಲ್ಯದಿಂದಲೂ ನೋಡಿದ್ದೇನೆ. ನೀರು ಒಯ್ಯಲು ಬಂದಾಗೊಮ್ಮೆ ಮಾತಾನಾಡಿಸುತ್ತಿದ್ದೆ. ಅಗಿನಿಂದಲೂ ನಮ್ಮ ರಾಣಿಗೆ ನಿಮ್ಮ…

Read More