ಮಕ್ಕಳ ಹಕ್ಕುಗಳ ರಕ್ಷಣೆ ದೊಡ್ಡ ಜವಾಬ್ದಾರಿ : ರಾಘವೇಂದ್ರ

ಕೊಪ್ಪಳ, ಆ. ೧೭: ದೇಶದ ಹದಿನಾಲ್ಕು ವರ್ಷದ ಮಕ್ಕಳ ರಕ್ಷಣೆಯ ಜವಾಬ್ದಾರಿ ಅತ್ಯಂತ ದೊಡ್ಡದು, ಭವಿಷ್ಯದ ಭಾರತದ ರಚನೆಗೆ ಅದು ನಾಂದಿ ಎಂದು ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ನೂತನ ಸದಸ್ಯ ರಾಘವೇಂದ್ರ ಹೆಚ್. ಸಿ. ಹೇಳಿದರು. ಅವರು ನಗರದ ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ ಹಾಘೂ ಸ್ವಾಭಿಮಾನಿ ಸಂಚಲನ ಮಹಿಳಾ ಸಮಿತಿ ವತಿಯಿಂದ ನಡೆದ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕಾನೂನು ರೀತಿಯಲ್ಲಿ ಅಧಿಕಾರ ಹೊಂದಿರುವ ಎಲ್ಲಾ ಇಲಾಖೆಯ ಅಧಿಕಾರಿಗಳು ಮಕ್ಕಳ ವಿಷಯಕ್ಕೆ ಸಂಬಂಧಿಸಿದ ಕೆಲಸಗಳನ್ನು ಮಾಡಲೇಬೇಕುಬೇಖು ಇಲ್ಲವಾದಲ್ಲಿ ದಂಡಕ್ಕೆ ಮತ್ತು ಶಿಕ್ಷೆಗೆ ಗುರಿಯಾಗುತ್ತಾರೆ. ಬಾಲ್ಯ ವಿವಾಹ, ಬಾಲ್ಯ ಕಾರ್ಮಿಕ ಪದ್ಧತಿ ಮತ್ತು ಪೋಕ್ಸೋ ಅಡಿಯಲ್ಲಿ ಯುವತಿಯರ ಮತ್ತು ಯುವಕರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ತೀವ್ರವಾಗಿದ್ದು, ಸಮಾಜ ಸುಧಾರಿಸಲು ಸಂಬಂಧಿಸಿದ ಎಲ್ಲಾ ಇಲಾಖೆಗಳು ತುರ್ತು ಕ್ರಮ ತೆಗೆದುಕೊಳ್ಳಬೇಕು. ಪ್ರತಿ ತಿಂಗಳು…

Read More