ಮನುಕುಲದ ಏಳಿಗೆಗಾಗಿ ವಿಜ್ಞಾನ’

ಮನುಕುಲದ ಏಳಿಗೆಗಾಗಿ ವಿಜ್ಞಾನ’ ಎಂಬ ಘೋಷಣೆಯೊಂದಿಗೆ ತುಂಬಾ ಯಶಸ್ವಿಯಾಗಿ ಬ್ರೇಕ್ ಥ್ರೂ  ಸೈನ್ಸ್ ಸೋಸೈಟಿ ಆಯೋಜಿಸಿದ ಇಂಡಿಯಾ ಮಾರ್ಚ್  ಫಾರ್ ಸೈನ್ಸ್ ಕಾರ್ಯಕ್ರಮವು ನಡೆಯಿತು.  ನಂತರ ಸರ್ಕಾರಿ ಪ್ರಥಮ ಕಾಲೇಜಿನ ಸಭಾಂಗಣದಲ್ಲಿ ಆಯೋಜನೆ ಗೊಂಡ ಕಾರ್ಯಕ್ರಮವನ್ನು ಉದ್ದೇಶಿಸಿ ಕಾಲೇಜಿನ ಪ್ರಾಚಾರ್ಯರಾದ ಡಾ. ಸಿ ಬಿ  ಚಿಲ್ಕರಾಗಿ ಮಾತನಾಡಿ ‘ ಸಾಮಾಜಿಕ ಜಾಲತಾಣಗಳಲ್ಲಿ ಟಿವಿಗಳಲ್ಲಿ ಅವೈಜ್ಞಾನಿಕ ವಿಚಾರಗಳನ್ನು ವ್ಯಾಪಕವಾಗಿ ಹರಡುತ್ತಿದ್ದಾರೆ. ವೈಚಾರಿಕವಾಗಿ ಮುಂದುವರಿಯಬೇಕಾದ ನಮ್ಮ ದೇಶ ಹಿಂದಕ್ಕೆ ಹೆಜ್ಜೆ ಇಡುತ್ತಿರುವುದು ವಿಷಾದನೀಯ ಎಂದು ಆತಂಕ ವ್ಯಕ್ತಪಡಿಸಿದರು. ಸಂವಿಧಾನದ 51ಎ ಪರಿಚ್ಛೇದವು  ಮೌಢ್ಯತೆಯನ್ನು ವಿರೋಧಿಸುವ ಪರಿಚ್ಛೇದವಾಗಿದೆ ಆದರೆ ಈ ಪರಿಚಯದ ನಮ್ಮ ದೇಶದಲ್ಲಿ ಸರಿಯಾದ ಕಾರ್ಯಚರಣೆ ಮಾಡುತ್ತಿಲ್ಲ ಎಂದು ಮಾತನಾಡಿದರು.  ಬ್ರೇಕ್ ಥ್ರೂ ಸೈನ್ಸ್ ಸೊಸೈಟಿಯ ಜಿಲ್ಲಾ ಸಂಚಾಲಕರಾದ ಶರಣು ಪಾಟೀಲ ಮಾತನಾಡಿ. ಸಂಶೋಧನಾ ಕಾರ್ಯಗಳಲ್ಲಿ ಅಮೋಘ ಸಾಧನೆ ಮಾಡಿರುವ ದೇಶಗಳಲ್ಲಿ ಶಿಕ್ಷಣಕ್ಕೆ ವಿಫುಲವಾದ ಅಂದರೆ ರಾಷ್ಟ್ರೀಯ ಸಮಗ್ರ ಉತ್ಪನ್ನದ…

Read More