ಜನತಂತ್ರದ ರಕ್ಷಣೆಗೆ ಹೋರಾಟವೇ ದಾರಿ

ಮತ್ತೆ ಅಧಿಕಾರಕ್ಕೆ ಬಂದಿರುವ ಬಿಜೆಪಿ ತನ್ನ ಹಿಡನ್ ಮತ್ತು ಓಪನ್ ಅಜೆಂಡಾಗಳ ಜಾರಿಗೆ ಶರವೇಗದಿಂದ ಹೊರಟಿದೆ. ಮುಂಚೆ ಕಾಂಗ್ರೆಸ್ ಮುಕ್ತ ಭಾರತ ಎಂದು ಮಾತನ್ನಾಡುತ್ತಿದ್ದ ಅಮಿತ್ ಶಾ ಈಗ ಕೇರಳ ಬಂಗಾಳಗಳನ್ನು ಗೆದ್ದರೆ ಸಂಪೂರ್ಣವಾಗಿ ಗೆದ್ದಂತೆ ಎಂದು ಹೇಳುತ್ತಿದ್ದಾರೆ. ಇನ್ನೊಂದೆಡೆ ಕಾರ್ಪೊರೇಟ್ ಬಂಡವಾಳಶಾಹಿಗೆ ಸಾವಿರಾರು ಎಕರೆ ಅರಣ್ಯ ಭೂಮಿಯನ್ನು ಮನಬಂದಂತೆ ಕೊಡಲಾಗುತ್ತಿದೆ. ಇನ್ನೊಂದೆಡೆ ಪ್ರತಿಪಕ್ಷಗಳು ಸೋಲಿನ ಆಘಾತದಿಂದ ಇನ್ನೂ ಚೇತರಿಸಿಲ್ಲ.ಲೋಕಸಭಾ ಚುನಾವಣೆಯನ್ನೂ ಕೂಡ ಸರಿಯಾಗಿ, ಸುಸಜ್ಜಿತವಾಗಿ ಎದುರಿಸಲಿಲ್ಲ. ಒಂದೆಡೆ ಆರೆಸ್ಸೆಸ್‌ನ 6 ಲಕ್ಷ ಸ್ವಯಂ ಸೇವಕರು ಗ್ರಾಮೀಣ ಪ್ರದೇಶಕ್ಕೆ ಹೋಗಿ ಮನೆಮನೆ ಬಾಗಿಲು ತಟ್ಟಿ ವ್ಯವಸ್ಥಿತವಾಗಿ ಪ್ರಚಾರ ಮಾಡಿದರು. ಆದರೆ ಪ್ರತಿಪಕ್ಷಗಳಲ್ಲಿ ಅಂಥ ಸಿದ್ಧತೆ ಇರಲಿಲ್ಲ. ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳು ಬಿಜೆಪಿಯನ್ನು ಸೋಲಿಸುವ ಬಗ್ಗೆ ಮಾತಾಡಿದವು. ಆದರೆ ಅದಕ್ಕೆ ತಕ್ಕ ಕಾರ್ಯತಂತ್ರ ರೂಪಿಸಲಿಲ್ಲ. ಒಣ ಪ್ರತಿಷ್ಠೆ ಬಿಟ್ಟು ಒಂದುಗೂಡಿ ಚುನಾವಣೆ ಎದುರಿಸಿದ್ದರೆ ಇಂಥ ಸೋಲು ಅನುಭವಿಸುವ…

Read More