ಜಾತಿಗಳು ಇವರಪ್ಪನ ಆಸ್ತಿಯಲ್ಲ. ಎಲ್ಲಾ ಆಸ್ತಿನೂ ಬಿಜೆಪಿಯದೆ-ಕೆ.ಎಸ್.ಈಶ್ವರಪ್ಪ

ಕೊಪ್ಪಳ :ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಿದ್ದಕ್ಕೆ ಇಡೀ ಪ್ರಪಂಚವೇ ಸಂಭ್ರಮಿಸಿ ಸ್ವಾಗತಿಸಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು. ಅವರು ಭಾನುವಾರ ನಗರದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಕಾರ್ಯಕರ್ತರಿಗೆ ಹಾಗೂ ಸಂಸದ ಸಂಗಣ್ಣ ಕರಡಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಿಜೆಪಿಗೆ ಜಾತಿವಾರು, ವರ್ಗವಾರು ಮತ ನೀಡಲ್ಲ ಎಂದು ಹೇಳಿದ್ದ ಅನೇಕರು ಮುಖಮುಚ್ಚಿ ಓಡಾಡುವಂತಾಗಿದೆ. ತೊಡೆತಟ್ಟಿ, ಡ್ಯಾನ್ಸ್ ಮಾಡಿದವರೆಲ್ಲ ಇಂದು ಎಲ್ಲಿದ್ದಾರೆ ಎಂದು ಹುಡುಕಬೇಕಿದೆ. ಸುಮಾಲತ ಬಗ್ಗೆ ಅಪಪ್ರಚಾರ ಮಾಡಿದ ಜೆಡಿಎಸ್, ದೇವೇಗೌಡಗೆ ಒಕ್ಕಲಿಗರು ಸರಿಯಾಗಿ ಬುದ್ಧಿ ಕಲಿಸಿದ್ದಾರೆ. ಕುರುಬರಿಗೆ ಮೂರು ಸೀಟು ಕೊಟ್ಟು ನಮಗೆ ಮಾತನಾಡಿದ್ದ ಸಿದ್ದರಾಮಯ್ಯಗೆ ಕುರುಬರೇ ದೂರ ಮಾಡಿದ್ದಾರೆ. ಬರುವ ದಿನಗಳಲ್ಲಿ ದೇಶದಲ್ಲಿ ಜಾತಿ ಮತ ಪಂಥ ವರ್ಗ ಎಲ್ಲವೂ ಹೋಗಿ ಕೇವಲ ಅಭಿವೃದ್ಧಿಗೆ ಮತ ಕೇಳುವ ದಿನಗಳು ಬರುತ್ತಿವೆ. ಜಾತಿ ಬಗ್ಗೆ ಪ್ರತಿ ಚುನಾವಣೆಯಲ್ಲಿ ಕೇಳಿ ಕೇಳಿ ಸಾಕಾಗಿದೆ. ಜಾತಿಗಳು ಇವರಪ್ಪನ…

Read More