ವಾಲ್ಮಿಕಿ ಭವನ ಕಟ್ಟಡ ಸ್ಥಳಕ್ಕೆ ಸಚಿವ ಶಾಸಕರ ಭೇಟಿ

ಕೊಪ್ಪಳ, ಜೂ.೧೦: ನಗರದ ಕಿನ್ನಾಳ ರಸ್ತೆಯ ಅಗಡಿ ಬಡಾವಣೆಯಲ್ಲಿರುವ ವಾಲ್ಮಿಕಿ ಸಮುದಾಯ ಭವನದ ಕಟ್ಟಡ ನಡೆಯುವ ಸ್ಥಳಕ್ಕೆ ಇಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ, ವೈದ್ಯಕೀಯ ಶಿಕ್ಷಣ ಸಚಿವ ತುಕಾರಾಂ ಭೇಟಿ ನೀಡಿ ಕಟ್ಟಡದ ಮಾಹಿತಿ ಪಡೆದರು. ಕೊಪ್ಪಳ ಶಾಸಕ ಸಂಸದೀಯ ಕಾರ್ಯದರ್ಶಿ ಕೆ. ರಾಘವೇಂದ್ರ ಹಿಟ್ನಾಳ್ ಅವರ‌ ಆಸಕ್ತಿಯಿಂದ ಅವರ ಅನುದಾನದಲ್ಲಿ ಅಂದಾಜು ೪೯ ಲಕ್ಷ ರೂ. ಹಣದಲ್ಲಿ ಸುಮಾರು ೧೧೦ ಅಡಿ ಅಗಲ ೨೦೮ ಅಡಿ ಉದ್ದ ಜಾಗದಲ್ಲಿ ನಿರ್ಮಾಣ ಮಾಡುತ್ತಿರುವ ಸುಮಾರು ೩.೫೦ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದ್ದು, ೧.೫೦ ಕೋಟಿ ಹಣ ಬಿಡುಗಡೆ ಆಗಿದ್ದು, ಬಾಕಿ ೨ ಕೋಟಿ ರೂಪಾಯಿ ಹಣ ಬಿಡುಗಡೆಗೆ ಸರಕಾರಕ್ಕೆ ಪತ್ರ ಬರೆಯಲಾಗಿದೆ. ಸಮಾಜದ ಪರವಾಗಿ ಈ ವೇಳೆ ಸಚಿವರನ್ನು ಸನ್ಮಾನಿಸಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಮತ್ತು ೭.೫ ಮೀಸಲಾತಿ ನೀಡುವ ಕುರಿತು ಸಂಪÅಟದಲ್ಲಿ ಚರ್ಚಿಸುವಂತೆ…

Read More