ಗಂಗಾವತಿ ಭಾಗದ ಜನರ ಆಸೆ ಈಡೇರಿಸಿದ ಸಂಸದ ಕರಡಿ ಸಂಗಣ್ಣ

ಗಂಗಾವತಿ : ರೈಲು ಪ್ರಗತಿಯ ಸಂಕೇತವಾಗಿದ್ದು ಒಂದು ವರ್ಷದೊಳಗೆ ಸಿಂಧನೂರು ಮತ್ತು ಬೆಂಗಳೂರಿಗೆ ರೈಲು ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುವದು ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು . ಸೋಮವಾರ ನಗರದ ರೈಲ್ವೆ ನಿಲ್ದಾಣ ಗಂಗಾವತಿ – ಹುಬ್ಬಳ್ಳಿ ಎಕ್ಸಪ್ರೆಸ್ ರೈಲಿಗೆ ಚಾಲನೆ ನೀಡಿ ಮಾತನಾಡಿದ ಅವರು , 23 ವರ್ಷಗಳ ಹಿಂದೆ ರೈಲ್ವೆ ಮಾರ್ಗದ ನಿರ್ಮಾಣ ಕಾಮಗಾರಿ ಆರಂಭವಾಗಿತ್ತು . ನರೇಂದ್ರ ಮೋದಿ ಪ್ರಧಾನಿಯಾಗಿ ಕಾಮಗಾರಿ ತ್ವರಿತವಾಗಿ ನಡೆಸಿ ಗಿಣಿಗೇರಾದಿಂದ ಗಂಗಾವತಿ . ಮೀ . ಕಾಮಗಾರಿ ಪೂರ್ಣಗೊಳಿಸಿ ರೈಲು ಸಂಚಾರ ಆರಂಭವಾಗಿದೆ ಮುಂದಿನ ಒಂದು ವರ್ಷದಲ್ಲಿ ಸಿಂಧನೂರು ಹಾಗೂ ಬೆಂಗಳೂರಿಗೆ ರೈಲು ಸಂಚಾರ ಆರಂಭಿಸಲು ಹಾಗೂ ಕೇಂದ್ರ ಸರಕಾರ ಜತೆ ಸಂಪರ್ಕ ಸಾಧಿಸಲಾಗುತ್ತದೆ . ಗಂಗಾವತಿ ನಿಲ್ದಾಣಕ್ಕೆಪೂರ್ಣಪ್ರಮಾಣದಲ್ಲಿ ಸಿಬ್ಬಂದಿ ಹಾಗೂ ರೈಲ್ವೆ ಪೊಲೀಸ್ ನಿಯೋಜಿಸಲು ಈಗಾಗಲೇ ರೈಲ್ವೆ ಇಲಾಖೆ ಹಿರಿಯ ಆಧಿ ಕಾರಿಗಳಿಗೆ ಪತ್ರ ಬರೆಯಲಾಗಿದೆ…

Read More