ಆರ್ಯುವೇದಿಕ್ ಕಾಲೇಜಿನಲ್ಲಿ ರಸ ಪ್ರಶ್ನೆಕಾರ್ಯಕ್ರಮ

  ಕೊಪ್ಪಳ : ಜೂನ್ ೦೩, ಇತ್ತಿಚಿಗೆ ನಗರದ ಶ್ರೀ ಜ.ಗು.ಗ.ಆರ್ಯುವೇದಿಕ್ ಮಹಾವಿದ್ಯಾಲಯದಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ರಸ ಪ್ರಶ್ನೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಪ್ರಾಚಾರ್ಯರಾದ ಬಿ.ಎಸ್. ಸವಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ದ್ರವ್ಯಗುಣ, ರಸಶಾಸ್ತ್ರ, ರೋಗನಿಧಾನ ಮತ್ತು ಚರಕ ಸಂಹಿತಾ ವಿಷಯಗಳ ಸುಮಾರು ೩೦೦ ಪ್ರಶ್ನೆಗಳನ್ನು ೫ ಸುತ್ತುಗಳಲ್ಲಿ ಕೇಳಲಾಗಿತ್ತು. ೬ ತಂಡಗಳು ಭಾಗವಹಿಸಿ ಅದ್ಬುತವಾಗಿ ಉತ್ತರಿಸಿದರು. ಒಟ್ಟು ೬ ತಂಡಗಳ ಈ ರಸ ಪ್ರಶ್ನೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಇದರಲ್ಲಿ ಅಭ್ರಕತಂಡ ಪ್ರಥಮ ಬಹುಮಾನ, ಶಿಲಾಜತು ತಂಡ ದ್ವಿತೀಯ ಬಹುಮಾನ ಮತ್ತು ಮಾಕ್ಷಿಕ ತಂಡ ತೃತೀಯ ಬಹುಮಾನವನ್ನು ಪಡೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಡಾಕ್ಟರ್‌ಗಳಾದ .ಎಸ್ ಎಸ್ ಶಿರೂರಮಠ, ರುದ್ರಾಕ್ಷಿ ದೇವರಗುಡಿ, ಎಸ್ ಎಸ್ ಕುಲಕರ್ಣಿ, ಡಾ. ಕಿಶೋರ್, ಗಂಗಾಧರ, ಖಾಲೀದ್, ತೀರ್ಪುಗಾರರಾಗಿ ಡಾ ಸಿ ಎಸ್ ಕರಮುಡಿ, ಡಾ ಶಶಿಧರ ಜೆ, ಡಾ. ವೆಂಕಮ್ಮ, ಡಾ ಹೇಮಾ ಕಾರ್ಯನಿರ್ವಹಿಸಿದರು,…

Read More