ಕಾರ್ಗಿಲ್ ಯೋಧನನ್ನು ‘ವಿದೇಶಿ’ ಎಂದು ಘೋಷಿಸಿದ ಪ್ರಕರಣ: ಸನಾವುಲ್ಲಾರ ಬೆಂಬಲಕ್ಕೆ ನಿಂತ ಸೇನೆ

ಗುವಾಹತಿ, ಜೂ.2: ಭಾರತೀಯ ಸೇನೆಯ ನಿವೃತ್ತ ಯೋಧರಿಗೆ ‘ವಿದೇಶಿ ವ್ಯಕ್ತಿ’ ಎಂದು ಹಣೆಪಟ್ಟಿ ಕಟ್ಟಿದ ವಿಚಾರ ಭಾರೀ ವಿವಾದ ಸೃಷ್ಟಿಸಿದ ನಂತರ ಇದು ವ್ಯಕ್ತಿಯನ್ನು ತಪ್ಪಾಗಿ ಗುರುತಿಸಿರುವುದರಿಂದ ಆಗಿರುವ ಪ್ರಮಾದ ಎಂದು ಸ್ಥಳೀಯ ಸುದ್ದಿವಾಹಿನಿಗೆ ಸ್ಪಷ್ಟನೆ ನೀಡಲಾಗಿದೆ. ಈ ಮಧ್ಯೆ ಯೋಧ ಮುಹಮ್ಮದ್ ಸನಾವುಲ್ಲಾ ಅವರ ಕುಟುಂಬವನ್ನು ಸಂಪರ್ಕಿಸಿದ ಭಾರತೀಯ ಸೇನೆಯ ಅಧಿಕಾರಿಗಳು, ಸನಾವುಲ್ಲಾ ಬೆಂಬಲಕ್ಕೆ ನಿಂತಿದ್ದಾರೆ. 2008ರಲ್ಲಿ ಅಸ್ಸಾಂ ಪೊಲೀಸ್ ಪಡೆಯ ಗಡಿವಿಭಾಗ ತನಿಖೆ ನಡೆಸಿ ಸಿದ್ಧಪಡಿಸಿದ ವರದಿಯಲ್ಲಿ, ಸನಾವುಲ್ಲಾ ಅವರನ್ನು ಕಾರ್ಮಿಕ ಎಂದು ಗುರುತಿಸಿದ್ದಲ್ಲದೇ, ಶಂಕಿತ ಅಕ್ರಮ ವಲಸಿಗ ಎಂದು ಹಣೆಪಟ್ಟಿ ಕಟ್ಟಿತ್ತು. ಈ ಪ್ರಕರಣವನ್ನು ಅರೆನ್ಯಾಯಾಂಗ ಸಂಸ್ಥೆಯಾದ ವಿದೇಶಿ ನ್ಯಾಯಮಂಡಳಿಗೆ ವರ್ಗಾಯಿಸಲಾಗಿತ್ತು. ಅಸ್ಸಾಂ ಪೊಲೀಸರು ಅಥವಾ ಭಾರತೀಯ ಚುನಾವಣಾ ಆಯೋಗ ಅಕ್ರಮ ವಲಸಿಗರು ಎಂದು ಪರಿಗಣಿಸಿದ ಪ್ರಕರಣಗಳ ಬಗ್ಗೆ ತೀರ್ಮಾನ ಕೈಗೊಳ್ಳುತ್ತದೆ. ಕಮ್ರಪ್ ಗ್ರಾಮೀಣ ಜಿಲ್ಲಾ ನ್ಯಾಯಮಂಡಳಿ ಸನಾವುಲ್ಲಾ (52) ಅವರನ್ನು ವಿದೇಶಿ…

Read More