ಕೊಪ್ಪಳ ಮತ ಎಣಿಕೆ : ಪೊಲೀಸ್ ಬಂದೋಬಸ್ತ್ ವಾಹನಗಳ ಸಂಚಾರ ಮಾರ್ಗ ಬದಲಾವಣೆ ಹಾಗೂ ಪಾರ್ಕಿಂಗ್ ವ್ಯವಸ್ಥೆ

ಕೊಪ್ಪಳ ಮೇ. :   ಕೊಪ್ಪಳ ಲೋಕಸಭಾ ಕ್ಷೆÃತ್ರದ ಮತ ಎಣಿಕೆಯು ಮೇ. 23 ರಂದು ನಗರದ ಶ್ರಿÃ ಗವಿಸಿದ್ಧೆÃಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನಲ್ಲಿ ನಡೆಯಲಿದ್ದು ಕೊಪ್ಪಳ ಜಿಲ್ಲಾ ಪೊಲೀಸ್‌ವತಿಯಿಂದ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಣುಕಾ ಕೆ.ಸುಕುಮಾರ್ ರವರು ತಿಳಿಸಿದ್ದಾರೆ. ಮತ ಎಣಿಕೆ ಸಮಯದಲ್ಲಿ ಗವಿಮಠ ರಸ್ತೆಗೆ ಬರುವ ದಿನನಿತ್ಯದ ವಾಹನಗಳ ಸಂಚಾರವನ್ನು ನಿರ್ಭಂಧಿಸಲಾಗಿದ್ದು, ಮತ ಎಣಿಕೆ ಕಾರ್ಯಕ್ಕೆ ಗಡಿಯಾರಕಂಭದ ಮೂಲಕ ಹಾಗೂ ಬಸವೇಶ್ವರ ಸರ್ಕಲ್ ಮೂಲಕ ಗಮಿಮಠದ ರಸ್ತೆ ಬರುವ ವಾಹನಗಳ ಸಂಚಾರ ಹಾಗೂ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ಪಾರ್ಕಿಂಗ್; ಕೊಪ್ಪಳ ನಗರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳಿಂದ ಮತ ಎಣಿಕೆ ಕೇಂದ್ರಕ್ಕೆ ಬರುವ ಸಾರ್ವಜನಿಕರ ನಾಲ್ಕು ಚಕ್ರ ಹಾಗೂ ದ್ವಿÃಚಕ್ರ ವಾಹನಗಳಿಗೆ ಎಪಿಎಮ್‌ಸಿ ಆವರಣದಲ್ಲಿ ಮತ್ತು ಮತ ಎಣಿಕಾ ಕರ್ತವ್ಯಕ್ಕೆ ಬರುವ ಅಧಿಕಾರಿ ಮತ್ತು ಸಿಬ್ಬಂದಿಗಳ…

Read More