ಸಾಹಿತ್ಯ ಭವನದ ನಿರ್ವಹಣೆಗೆ ಬಾಡಿಗೆ ಪಡೆಯಲು ಡಿಸಿಗೆ ಮನವಿ

ಕೊಪ್ಪಳ, ಮೇ. ೨೦: ಕೊಪ್ಪಳ ನಗರದ ಮುಖ್ಯವಾದ ಏಕೈಕ ಸಭಾ ಭವನವಾಗಿರುವ ಸಾಹಿತ್ಯ ಭವನದ ನಿರ್ವಹಣೆಗೆ, ಮೂಲ ಸೌಕರ್ಯ ಸರಿಮಾಡಲು ಭವನದ ಪಕ್ಕದಲ್ಲಿರುವ ಜಾಗದಲ್ಲಿ ಅಂಗಡಿ ನಡೆಸಲು ಬಾಡಿಗೆ ಪಡೆಯಬೇಕು ಎಂದು ಯುವ ಹೋರಾಟಗಾರ ಮಂಜುನಾಥ ಜಿ. ಗೊಂಡಬಾಳ ಜಿಲ್ಲಾಧಿಕಾರಿ ಸುನೀಲ್ ಕುಮಾರ ಅವರಿಗೆ ಮನವಿ ಮಾಡಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ನಗರದ ಪ್ರಮುಖ ಹೃದಯ ಭಾಗದಲ್ಲಿರುವ ಸಾಹಿತ್ಯ ಭವನ ೬೨ನೇ ಸಾಹಿತ್ಯ ಸಮ್ಮೇಳನದ ಸವಿನೆನಪಲ್ಲಿ ಅದರಲ್ಲಿ ಉಳಿದ ಹಣದಿಂದ ಮಲ್ಲಿಕಾರ್ಜುನ ದಿವಟರ್ ಅವರು ಶಾಸಕತ್ವದಲ್ಲಿ ನಿರ್ಮಾಣ ಮಾಡಲಾಗಿದ್ದು. ಪ್ರತ್ಯೇಕವಾಗಿ ಅದರನ್ನು ಕೋಟಿ ಕೋಟಿ ಹಣ ಹಾಕಿ ಅಭಿವೃದ್ಧಿಪಡಿಸಲಾಗಿದೆ. ಆದರೆ ಏನು ಅಭಿವೃದ್ಧಿಯಾಗಿದೆ ಎಂಬುದು ಮಾತ್ರ ಅರ್ಥವೇ ಆಗುತ್ತಿಲ್ಲ. ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರು ಸೇರುವ ಒಂದು ಪ್ರಮುಖ ಏಕೈಕ ಸಾಂಸ್ಕೃತಿಕ ಭವನವಾಗಿದ್ದು, ನೀರು ಮತ್ತು ಶೌಚಾಲಯದ ಸಮಸ್ಯೆ ಈಗಲೂ ಸುಧಾರಿಸಿಲ್ಲ. ಇಲ್ಲಿ ಕಾರ್ಯಕ್ರಮ ಮಾಡಬೇಕೆಂದರೆ,…

Read More