ಹುಲಿಗೆಮ್ಮದೇವಿ ಜಾತ್ರಾ ಮಹೋತ್ಸವ: ಎಲ್ಲಾ ವ್ಯವಸ್ಥೆ ಅಚ್ಚುಕಟ್ಟಾಗಿ ನಿರ್ವಹಿಸಲು ಸೂಚನೆ

ಕೊಪ್ಪಳ ಮೇ. ೧೫ : ಕೊಪ್ಪಳ ಜಿಲ್ಲೆಯ ಧಾರ್ಮಿಕ ಕ್ಷೇತ್ರವಾದ ಹುಲಿಗೇಮ್ಮ ದೇವಿಯ ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಭಕ್ತಾಧಿಗಳು ಭಾಗವಹಿಸಲಿದ್ದು ಯಾವುದೇ ಅನಾನುಕೂಲವಾಗದಂತೆ ಸೌಲಭ್ಯ ಕಲ್ಪಿಸಬೇಕೆಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಸೂಚನೆ ನೀಡಿದರು. ಅವರು ಇಂದು (ಮೇ.೧೫ ರಂದು) ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಾತ್ರಾ ಮಹೋತ್ಸವದ ಪೂರ್ವ ಸಿದ್ಧತೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹುಲಿಗೇಮ್ಮ ದೇವಿಯ ಜಾತ್ರಾ ಕಾರ್ಯಕ್ರಮವು ಮೇ.೧೯ ರಿಂದ ಆರಂಭವಾಗಲಿದೆ. ಮೇ.೨೭ ರಂದು ಸಂಜೆ ೦೭-ಗಂಟೆಗೆ ಉತ್ಸವ, ಮೇ.೨೮ ರಂದು ಸಂಜೆ ೦೫.೩೦ಕ್ಕೆ ಮಹಾರಥೋತ್ಸವ ನಡೆಯಲಿದೆ. ಮೇ.೨೯ ರಂದು ಬಾಳಿದಂಡಿಗೆ ಹಾಗೂ ಮೇ.೩೦ ರಂದು ಪಾಯಸ ಅಗ್ನಿಕುಂಡ ಹಾಗೂ ಮೇ.೩೧ ರಂದು ಬೆಳಿಗ್ಗೆ ೦೬.೩೦ಕ್ಕೆ ಅಗ್ನಿಕುಂಡ ನಡೆಯಲಿದೆ. ಜೂನ್ ೧೮ ರಂದು ರಾತ್ರಿ ೮ ಗಂಟೆಗೆ ಶ್ರೀದೇವಿಯವರ ಕಂಕಣ ವಿಸರ್ಜನೆ ಮಾಡುವ ಮೂಲಕ ಜಾತ್ರಾ ಕಾರ್ಯಕ್ರಮ ಸಮಾರೊಪನಗೊಳ್ಳಲಿದೆ. ಜಾತ್ರೆಗೆ ಹೊರರಾಜ್ಯ ಸೇರಿದಂತೆ ಅಕ್ಕ,ಪಕ್ಕದ…

Read More