ಸೈಬರ್ ಮತ್ತು ಆರ್ಥಿಕ ಅಪರಾಧಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಅತ್ಯವಶ್ಯಕ : ಸೋಮಶೇಖರ ಜುಟ್ಟಲ್

ಕೊಪ್ಪಳ ಮೇ.: ಸೈಬರ್ ಮತ್ತು ಆರ್ಥಿಕ ಅಪರಾಧಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಅತ್ಯವಶ್ಯಕವಾಗಿದೆ ಎಂದು ಕೊಪ್ಪಳ ಸೈಬರ್, ಅರ್ಥಿಕ ಮತ್ತು ಮಾದಕ ದ್ರವ್ಯ ಅಪರಾದ ಪೊಲೀಸ್ ಠಾಣೆಯ ಪಿ.ಐ ಸೋಮಶೇಖರ ಜುಟ್ಟಲ್ ಅವರು ಹೇಳಿದರು. ಸೈಬರ್ ಮತ್ತು ಆರ್ಥಿಕ ಅಪರಾಧಗಳ ಬಗ್ಗೆ ಕೊಪ್ಪಳ ಜಿಲ್ಲಾ ಪೊಲೀಸ್ ವತಿಯಿಂದ ಇಂದು (ಮೇ. 14 ರಂದು) ನಗರದ ಬಿ.ಎಸ್. ಪವಾರ ಹೋಟೆಲ್‌ನ ಮಿಟಿಂಗ್ ಹಾಲ್‌ನಲ್ಲಿ ಬ್ಯಾಂಕುಗಳ ಹಾಗೂ ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗೆ ಏರ್ಪಡಿಲಾದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬ್ಯಾಂಕ್ ಅಧಿಕಾರಿಗಳ ಹೆಸರಿನಲ್ಲಿ ನಡೆಯುವ ಡೆಬಿಟ್, ಕ್ರೆಡಿಟ್ ಕಾರ್ಡ ಬಳಸಿ ಎಟಿಎಮ್ ವಿತ್ ಡ್ರಾ ವಂಚನೆ, ಒಟಿಪಿ ಪಡೆದು ಮಾಡುವಂತಹ ವಂಚನೆಗಳ ಪ್ರಕರಣಗಳು ಜರುಗುತ್ತಿವೆ. ಬ್ಯಾಂಕುಗಳಾಗಲಿ ಅಥವಾ ಅಧಿಕಾರಿಗಳಾಗಲಿ ಇಂತಹ ಯಾವುದೇ ಮಾಹಿತಿಯನ್ನು ಕೇಳುವುದಿಲ್ಲ. ಇದರ ಬಗ್ಗೆ ಎಲ್ಲರಿಗೂ ತಿಳಿದಿರಬಹುದಾದ ವಿಶಷಯವಾಗಿದೆ ಆದರೂ ಸಹ ಈ ರೀತಿಯ ಮೊಸಕ್ಕೆ ಒಳಗಾಗುತ್ತಿದ್ದಾರೆ.…

Read More