ವಿಶ್ಚ ರತ್ನ ಬಾಬಾಸಾಹೇಬ ಅಂಬೇಡ್ಕರ-ಹಾಲೇಶ ಕಂದಾರಿ

ಮಾನವ ಜನಾಂಗದ ಹಕ್ಕಿಗಾಗಿ ಹೋರಾಡಿದ ಮಹಾನ್ ಮಾನವತಾವಾದಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ದಲಿತ ಜನಾಂಗದ ನಾಯಕರು ಮಾತ್ರವಲ್ಲ., ಅಗ್ರಗಣ್ಯ ರಾಷ್ಟ್ರ ನಾಯಕರೂ ಹೌದು. “ಭಾರತ ಸ್ವಾತಂತ್ರ್ಯವಾದರಷ್ಟೇ ಸಾಲದು; ಧಾರ್ಮಿಕ,ರಾಜಕೀಯ, ಸಾಮಾಜಿಕ,ಆರ್ಥಿಕ ವಿಷಯಗಳಲ್ಲಿ ಭರತಖಂಡದಲ್ಲಿ ಜನಿಸಿದವರೆಲ್ಲ ಸಮಾನ ಹಕ್ಕುಳ್ಳವರಾಗಬೇಕು” ಎಂಬ ಧೃಢಸಂಕಲ್ಪದಿಂದ ಹೋರಾಟ ನಡೆಸಿದ ವಿಶ್ವರತ್ನ ಡಾ.ಬಿ.ಆರ್.ಅಂಬೇಡ್ಕರ ರವರು ಸರ್ವರ ವಿಕಾಸಕ್ಕಾಗಿ ಶ್ರಮಿಸಿದರು ಎಂದು ಭೂ ನ್ಯಾಯ ಮಂಡಳಿಯ ಮಾಜಿ‌ ಸದಸ್ಯರಾದ ಹಾಲೇಶ ಕಂದಾರಿ ಮಾತನಾಡಿದರು. ಅವರು ಕೊಪ್ಪಳ ತಾಲೂಕಿನ‌ ಶಿವಪುರ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರರವರ 128ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಬುದ್ದ ವಿಚಾರವಾದಿ ಶೋಷಣೆಯ ವಿರುದ್ದ ಸತತ ಹೋರಾಟ ನಡೆಸಿದ ಆಧುನಿಕ ಭಾರತದ ನಿರ್ಮಾಪಕರಲ್ಲೋಬ್ಬರಾದ ಬಾಬಾ ಸಾಹೇಬರು ಸಮಾನತೆ ಮತ್ತು ಭಾತೃತ್ವದ ನೆಲೆಗಟ್ಟಿನ ಮೇಲೆ ಆದರ್ಶ ಸಮಾಜದ ನಿರ್ಮಾಣ ಸಾಧ್ಯವೆಂದು ನಂಬಿ ಶೋಷಿತರ ಸರ್ವಾಂಗೀಣ ಪ್ರಗತಿಗಾಗಿ ಕ್ರಾಂತಿಕಾರಕ ಚಳುವಳಿಯನ್ನು ಹುಟ್ಟುಹಾಕಿದ ಕೀರ್ತಿ ಅವರಿಗೆ…

Read More