ಇಂದು ವಿಶ್ವಪತ್ರಿಕಾ ಸ್ವಾತಂತ್ರ್ಯ ದಿನ

ಇಂದು ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ. ಪತ್ರಿಕಾ ಸ್ವಾತಂತ್ರದ ಮೂಲಭೂತ ತತ್ವ ಗಳ ಅರಿವು ಮೂಡಿಸಲು, ಮೌಲ್ಯಗಳನ್ನು ಎತ್ತಿ ಹಿಡಿಯಲು ಮತ್ತು ಪತ್ರಕರ್ತರ ರಕ್ಷಣೆಗೆಂದೇ ಹುಟ್ಟಿಕೊಂಡ ಈ ದಿನದ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. ದಿನದ ಹಿನ್ನೆಲೆ : ಪತ್ರಿಕಾ ಸ್ವಾತಂತ್ರ್ಯದ ಮೇಲಿನ ಸವಾರಿ ನಿನ್ನೆ ಮೊನ್ನೆಯದಲ್ಲ. ಜತೆಗೆ ಪತ್ರಕರ್ತರ ಹತ್ಯೆ ಅವ್ಯಾಹತವಾಗಿ ನಡೆಯುತ್ತಲೇ ಇದೆ. ಇದಕ್ಕೆ ದಶಕಗಳ ಇತಿಹಾಸವೇ ಇದೆ. ಇದರ ಪರಿಣಾಮವಾಗಿ 1991ರಲ್ಲಿ ನಡೆದ ಯುನೆಸ್ಕೋದ 26ನೇ ಸಮೇಳನದಲ್ಲಿ ಪತ್ರಿಕಾ ಸ್ವಾತಂತ್ರದ ಕುರಿತು ಆಫ್ರಿಕನ್ ಜರ್ನಲಿಸ್ಟ್ ಗಳ ಒತ್ತಾಸೆಯಂತೆ ಮೇ 3ರಂದು ವಿಶ್ವ ಪತ್ರಿಕಾ ದಿನಾಚರಣೆ ನಡೆಸುವ ತೀರ್ಮಾನಕ್ಕೆ ಬರಲಾಯಿತು. 1993ರಲ್ಲಿ ಇದು ಅಂಗೀಕಾರವಾಯಿತು. ಉದ್ದೇಶ : ವಿಶ್ವಾದಾದ್ಯಂತ ಪತ್ರಿಕಾ ಸ್ವಾತಂತ್ರ್ಯ ವನ್ನು ಮೌಲ್ಯಮಾಪನ ಮಾಡುವುದು, ತಮ್ಮ ಸ್ವಾತಂತ್ರ್ಯ ಕ್ಕಾಗಿ ಮಾಧ್ಯಮದ ಮೇಲೆ ನಡೆಯುತ್ತಿರುವ ದಾಳಿಯಿಂದ ರಕ್ಷಿಸಿಕೊಳ್ಳುವ ಮಾರ್ಗೋಪಾಯಗಳ ಬಗೆಅರಿವು ಮೂಡಿಸುವುದು , ವೃತ್ತಿ…

Read More