ಮೋದಿ ಮಾತು ನಂಬಿ ಕೆಡಬೇಡಿ, ಆತನೊಬ್ಬ ಮಾಟಗಾರ : ತಂಗಡಗಿ

ಕೊಪ್ಪಳ, ಎ. ೧೮: ಕಳೆದ ಲೋಕಸಭಾ ಚುನಾವಣಾ ವೇಳೆ ಮತದಾರರು ಮೋದಿಯ ಬಗ್ಗೆ ಏನೇನೋ ಆಸೆಗಳನ್ನು ಕಟ್ಟಿಕೊಂಡಿದ್ದರು. ಆದರೆ ೫ ವರ್ಷ ಆಡಳಿತ ಮಾಡಿದ ಮೋದಿ ಯಾವೊಂದು ಭರವಸೆಗಳನ್ನು ಈಡೇರಿಸಲಿಲ್ಲ. ಮೋದಿ ಒಬ್ಬ ಸುಳ್ಳುಗಾರ, ಮಾಟಗಾರನಿದ್ದಂತೆ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ವ್ಯಂಗ್ಯವಾಡಿದರು. ತಾಲೂಕಿನ ಭಾಗ್ಯನಗರ ಪಟ್ಟಣ ಪಂಚಾಯತ್ ಹಿಂದುಗಡೆ ಇರುವ ಬಯಲು ಮೈದಾನದಲ್ಲಿ ಮೈತ್ರಿ ಅಭ್ಯರ್ಥಿ ಕೆ. ರಾಜಶೇಖರ್ ಹಿಟ್ನಾಳ ಪರ ಬಹಿರಂಗ ಪ್ರಚಾರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಸರಕಾರ ದೇಶಕ್ಕೆ ಹಲವಾರು ನಾಯಕರುಗಳನ್ನ ಮತ್ತು ಪ್ರಧಾನಿಗಳನ್ನ ನೀಡಿದೆ. ಸ್ವಾತಂತ್ರ್ಯ ಬಂದಾಗಿನಿಂದಲೂ ದೇಶ ಅಭಿವೃದ್ಧಿಯಾಗತ್ತಲೇ ಬಂದಿದೆ. ವೈಜ್ಞಾನಿಕವಾಗಿ, ವಿಜ್ಞಾನ, ತಂತ್ರಜ್ಞಾನಗಳಿಂದ ಮುಂದುವರೆದಿದೆ. ಬಿಜೆಪಿಯ ಐದು ವರ್ಷದಲ್ಲಿ ಏನು ಆಗಿಲ್ಲ. ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗೆಲ್ಲ ದೇಶದಲ್ಲಿ ಹಲವಾರು ರೀತಿಯ ಕೆಲಸಗಳನ್ನು ಮಾಡುತ್ತಲೇ ಬಂದಿದೆ. ಈ ದೇಶದಲ್ಲಿರುವ ಎಲ್ಲಾ ವಿಮಾನ ನಿಲ್ದಾಣಗಳನ್ನು ಕಾಂಗ್ರೆಸ್ ಅಧಿಕಾರದಲ್ಲಿ ಕಟ್ಟಿಸಲಾಗಿದೆ.…

Read More