ಕೊಪ್ಪಳದಲ್ಲಿ ಮೈತ್ರಿ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಗೆಲುವು ಖಚಿತ : ಶಾಸಕ ಹಿಟ್ನಾಳ

ಕೊಪ್ಪಳ, ಎ. ೧೫: ಬಿಜೆಪಿ ಮೋದಿ ಹೆಸರಲ್ಲಿ ದೊಡ್ಡ ಭರವಸೆಗಳನ್ನು ನೀಡಿ, ಒಂದನ್ನೂ ಈಡೇರಿಸಿಲ್ಲ, ಎಲ್ಲಾ ವರ್ಗದ ಜನರಿಗೆ ಸಮಾನ ಅವಕಾಶ ನೀಡುವ ಪಕ್ಷ ದೇಶದಲ್ಲಿ ಕಾಂಗ್ರೆಸ್ ಮಾತ್ರವೇ ಆಗಿದ್ದು, ಸಿದ್ದರಾಮಯ್ಯನವರ ನೇತೃತ್ವದ ಸರಕಾರ ಮತ್ತು ಮೈತ್ರಿ ಸರಕಾರಗಳ ಸಾಧನೆಗಳಿಂದ ಗೆಲುವು ಖಚಿತ ಎಂದು ಶಾಸಕ, ಸಂಸದೀಯ ಕಾರ್ಯದರ್ಶಿ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು. ಅವರು ಕೊಪ್ಪಳ ಲೋಕಸಭಾ ಚುನಾವಣೆ ನಿಮಿತ್ಯ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೆ. ರಾಜಶೇಖರ್ ಹಿಟ್ನಾಳ ಪರವಾಗಿ ಮತಯಾಚನೆ ಸಲುವಾಗಿ ಕೊಪ್ಪಳ ನಗರದ ವಿವಿಧ ಕಡೆಗಳಲ್ಲಿ ಹಮ್ಮಿಕೊಂಡಿದ್ದ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಅವರು ಹೇಳಿದ ಅಷ್ಟೂ ಸುಳ್ಳಿನಿಂದ ಅವರು ನಿರ್ನಾಮವಾಗುತ್ತಾರೆ ಎಂದರು. ಸುಭದ್ರ ಸರಕಾರ ನೀಡುವ ಕಾಂಗ್ರೆಸ್‌ನಿಂದ ಮಾತ್ರ ಸರ್ವರ ಹಿತ ಕಾಪಾಡಲು ಸಾಧ್ಯ ಅದಕ್ಕಾಗಿ ಕಾಂಗ್ರೆಸ್ ಬೆಂಬಲಿಸಿ, ೧೬೫ ಭರವೆಗಳನ್ನು ಕೊಟ್ಟ ಕಾಂಗ್ರೆಸ್ ಸರಕಾರ ಅದಷ್ಟನ್ನೂ ಈಡೇರಿಸಿವೆ, ಆದರೆ ಜನರಿಗೆ ಅವುಗಳನನ್ನು…

Read More