ಬಿಜೆಪಿ ಪಕ್ಷದ ಪ್ರಣಾಳಿಕೆ ರೈತರ ಪರ- ಕರಡಿ ಸಂಗಣ್ಣ

Koppal ಬಿಜೆಪಿ ಪಕ್ಷದ ಪ್ರಣಾಳಿಕೆ ರೈತರ ಪರವಾಗಿದೆ, ಕೃಷಿ ಹಾಗೂ ನೀರಾವರಿ ಅಭಿವೃದ್ಧಿಗೆ ಸಾಕಷ್ಟು ಅನುಕೂಲವಾಗಲಿದೆ. ಆಂತರಿಕ ಭದ್ರತೆಯನ್ನು ಬಲಪಡಿಸುವಂತಿದೆ. ಗ್ರಾಮೀಣ ವಿಕಾಸ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಅಂತ ಕೊಪ್ಪಳ‌ ಲೋಕಸಭೆ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ಅಭಿಪ್ರಾಯ ವ್ಯಕ್ತ ಪಡಿಸಿದರು. ನಗರದಲ್ಲಿ ಸುದ್ದಿ ಗೋಷ್ಠಿ ನಡೆಸಿ ಅವರು ಮಾತನಾಡಿದರು. ಪ್ರಣಾಳಿಕೆಯ ಮಖ್ಯ ಉದ್ದೇಶ ಎಡಪಂಥೀಯ ಉಗ್ರವಾದವನ್ನು ಸಂಪೂರ್ಣ ನಿರ್ಮೂಲನೆ ಮಾಡುವುದು ಸಂವಿಧಾನ ವಿಧಿ ೩೭೦ ನ್ನು ರದ್ದು ಪಡಿಸಿ, ಭಯೋತ್ಪಾದನೆಯ ವಿರುದ್ಧ ರಾಜೀ ಇಲ್ದೆ ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡುವುದು. ಗಡಿಭಾಗದಲ್ಲಿ ನುಸುಳುಕೋರರನ್ನು ತಡೆ ಹಿಡಿದು ದೇಶದ ಸುರಕ್ಷತೆ ಕಾಪಾಡುವುದು ಅಂತ ಹೇಳಿದರು. ಇನ್ನು ರಾಷ್ಟ್ರ ಮೊದಲು ಪಕ್ಷ ನಂತರ ಎನ್ನುವ ತಾವು ಇಲ್ಲಿ ಬಲಪಂಥೀಯ ಹಾಗೂ ಎಡಪಂಥೀಯ ಬಗ್ಗೆ ಎಷ್ಟು ಸರಿ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಕರಡಿ ಸಂಗಣ್ಣ,…

Read More