ರೇಲ್ವೆ ವಿವಿಧ ಯೋಜನೆಗಳಿಗೆ ಸಂಸದ ಕರಡಿ ಸಂಗಣ್ಣ ಮನವಿ

ಕೊಪ್ಪಳ, ಡಿ.೦೬: ಕೊಪ್ಪಳ ಲೋಕಸಭಾ ಕ್ಷೇತ್ರದ ರೇಲ್ವೆ ಕಾಮಗಾರಿಗಳನ್ನು ಪ್ರಸಕ್ತ ಸಾಲಿನ ಅಂತ್ಯಕ್ಕೆ ಮುಕ್ತಾಯಗೊಳಿಸಬೇಕು ಎಂದು ಒತ್ತಾಯಿಸಿ ಸಂಸದ ಕರಡಿ ಸಂಗಣ್ಣ ದಕ್ಷಿಣ-ಪಶ್ಚಿಮ ರೇಲ್ವೆಯ ಪ್ರಧಾನ ವ್ಯವಸ್ಥಾಪಕರಾದ ಎ.ಕೆ ಸಿಂಗ್‌ರವರಿಗೆ ಗುರುವಾರದಂದು ಮನವಿ ಪತ್ರ ಸಲ್ಲಿಸಿದರು. ಸಿಂಗ್‌ರವರು ಹುಬ್ಬಳ್ಳಿಯಿಂದ ಗಂಗಾವತಿಯವರೆಗೆ ನೂತನ ರೇಲ್ವೆ ಮಾರ್ಗದ ವಿಕ್ಷೇಣೆಗೆ ಆಗಮಿಸಿದ ಸಂದರ್ಭದಲ್ಲಿ ಕೊಪ್ಪಳ ರೇಲ್ವೆ ನಿಲ್ದಾಣದಲ್ಲಿ ಸಂಸದ ಕರಡಿ ಸಂಗಣ್ಣ ಮನವಿ ಸಲ್ಲಿಸಿ ಮಾತನಾಡಿದರು. ಈಗಾಗಲೇ ಹುಬ್ಬಳ್ಳಿಯಿಂದ ಚಿಕ್ಕಬೆಣಕಲ್‌ವರೆಗೆ ಸಂಚರಿಸುತ್ತಿರುವ ಪ್ಯಾಸೆಂಜರ್ ರೈಲನ್ನು ಗಂಗಾವತಿವರೆಗೆ ಈ ತಿಂಗಳ ಕೊನೆಯಲ್ಲಿ ವಿಸ್ತರಿಸಿ, ಬಾಕಿ ಕಾಮಗಾರಿ ತ್ವರಿತಗೊಳಿಸುವುದು. ಹರಿಪ್ರೀಯ ಮತ್ತು ಕೊಲ್ಲಾಪೂರದಿಂದ ಹೈದರಾಬಾದಗೆ ಹೊರಡುವ ರೈಲುಗಳನ್ನು ಮುನಿರಾಬಾದ ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ನೀಡುವುದು. ಹುಬ್ಬಳ್ಳಿಯಿಂದ ತಿರುಪತಿಗೆ ಹೊರಡುವ ಪಾಸ್ಟ್ ಪ್ಯಾಸೆಂಜರ್ ರೈಲನ್ನು ಹಿಟ್ನಾಳ ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ನೀಡುವುದು. ಕೊಪ್ಪಳ ಜಿಲ್ಲಾ ಕೇಂದ್ರದ ರೇಲ್ವೆ ನಿಲ್ದಾಣವನ್ನು ಉನ್ನತ ದರ್ಜೇಗೆ ಅನುಮೋದಿಸಿ ಹೈಟೆಕ್ ಶೌಚಾಲಯ,…

Read More