ಪಂಚಕಳಸದ ಗುದ್ನೇಶ್ವರನ ತೇರು

ಗುದ್ನೆಶ್ವರನ ಜಾತ್ರೆ ಕುಕನೂರು ಇದೇ ಡಿಸೆಂಬರ ೨೨ರಂದು ಸಾಯಂಕಾಲ ೬-೦೦ ಗಂಟೆಗೆ ಐತಿಹಾಸಿಕ ಭವ್ಯ ಪರಂಪರೆಯ ಗುದ್ನೇಶ್ವರನ ಪಂಚಕಳಸ ತೇರು ಜರುಗುವುದು. ಕುಕನೂರಿನ ನೆರೆಯ ಹಾಗೂ ಪೂರ್ವಕ್ಕೆ ಇರುವ ಗುದ್ನೇಶ್ವರನ ತೇರು ನಾಡಿನಲ್ಲಿಯೇ ಬಹು ವಿಶಿಷ್ಟವಾದುದಾಗಿದೆ. ನಾಡಿನ ಬಹತೇಕ ಎಲ್ಲ ದೇವಾಲಯಗಳ ಜಾತ್ರೆಗಿಂತಲೂ ಪೂರ್ವದಲ್ಲಿಯೇ ಜಾತ್ರೆ ನೆವೇರುವುದರ ಜೊತೆಗೆ ಪಂಚಕಲಶ ಹೊಂದಿರುವಂತಹ ವೈಶಿಷ್ಟ್ಯತೆಯನ್ನು ಸಹ ಪಡೆದಿದೆ. ಸಾಮಾನ್ಯವಾಗಿ ಎಲ್ಲ ರಥಗಳಿಗೆ ಒಂದೇ ಕಳಸ ಇರುವುದು ವಾಡಿಕೆ ಆದರೆ ಈ ಗುದ್ನೇಶ್ವರನ ತೇರಿಗೆ ಐದು ಕಳಸಗಳಿರುವುದೊಂದು ವಿಶೇಷ ಗುದ್ನೇಶ್ವರ ಮಠದ ಅದಿದೈವ ರುದ್ರಮುನೀಶ್ವರ ಜನವಾಡಿಕೆಯಲ್ಲಿ ಗುದ್ನೇಶ್ವರನೆಂದೇ ಖ್ಯಾತಿಯಾಗಿದ್ದಾನೆ. ರುದ್ರಮುನಿಶ್ವರ ಜನವಾಡಿಕೆಯಲ್ಲಿ ಗುದ್ನೇಶ್ವರನೆಂದೇ ಖ್ಯಾತಿಯಾಗಿದ್ದಾನೆ, ರುದ್ರಮುನೀಶ್ವರರು ತಮ್ಮ ಲಿಂಗಲೀಲಾವಿಲಾಸದಿಂದಲೇ ಜನ-ಮನದ ಕ್ಷೆಟಿಗಳನ್ನು ದೂರಿಕರಿಸಿ ಇಂದಿಗೂ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ನೆಲೆಸಿದ್ದಾರೆ. ರೇವಣಸಿದ್ಧ ಹಾಗೂ ಸುಂದರ ನಾಚಿಯರೇ ರುದ್ರಮನೀಶ್ವರರ ತಂದೆ-ತಾಯಿಗಳವರು ಕಾಂಚಿಪುರದಿಂದ ಸಂಚಾರ ಗೈಯುತ್ತ ಮಂಗಳವಾಡೆಗೆ ಆಗಮಿಸಿದ ದಂಪತಿಗಳು ಆ ನಾಡಿನ ಜನರ…

Read More