ಈ ಪ್ರೇಮ ಹಕ್ಕಿಗಳಿಗೆ ಮದುವೆ ಮಾಡಿಸಲು ರಾಜ್ಯಪಾಲರೇ ನಿರ್ಧೇಶನ ಕೊಟ್ಟರಾ ? ನಿಜವಾಗಿಯೂ ನಡೆದಿದ್ದೇನು ?

ಆ ಎರಡು ಮನಸುಗಳು  ತಮ್ಮ ಬದುಕಿನ ಬಗ್ಗೆ ನೂರಾರು ಕನಸು ಕಟ್ಟಿಕೊಂಡಿದ್ದರು ಆದರೆ  ಇನ್ನೇನು ಆ ಜೋಡಿಗಳು ಮದುವೆಯಾಗಬೇಕು ಎನ್ನುವಷ್ಟರಲ್ಲಿ ಯುವತಿಯ ಕುಟುಂಬಸ್ಥರು, ಇಬ್ಬರ ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.  ಮನೆಯವರು ಒಪ್ಪಿಕೊಳ್ಳಲ್ಲ ಎಂದು ಅರಿವಾದ ನಂತರ  ಪ್ರೇಮಿಗಳು ಸಂಘಟನೆಗಳ ಮೊರೆ ಹೋಗಿದ್ದಾರೆ.   ಕೊನೆಗೆ ರಾಜ್ಯಪಾಲರೇ ನಿರ್ಧೇಶನ ಕೊಟ್ಟು ಮದುವೆ ಮಾಡಿಸಿದ್ಧಾರೆ ಎನ್ನಲಾಗುತ್ತಿದೆ  ಪೊಲೀಸರ ಸಮ್ಮುಖದಲ್ಲಿಯೇ   ಜೋಡಿಗಳು ಹಸೆಮಣೆ ಏರಿದ್ದಾರೆ. ಪೊಲೀಸರು ಸಮ್ಮುಖದಲ್ಲಿ ಬಿಗಿ ಬಂದೋಬಸ್ತಿನಲ್ಲಿ  ಸಂಭ್ರಮದಿಂದ ನಡೆದ ಲವ್ ಮ್ಯಾರೇಜ್..   ಕಂಡು ಬಂದಿದ್ದು, ಕೊಪ್ಪಳದಲ್ಲಿ. ಅಂದಹಾಗೇ ಪ್ರೇಮಿಗಳ ಮದುವೆಗೆ ಯುವತಿಯ ಕುಟುಂಬಸ್ಥರು ಒಪ್ಪದ ಕಾರಣ ಪ್ರೇಮಿಗಳು ಸಂಘಟನೆಗಳ ಮುಖಾಂತರ ರಾಜ್ಯಪಾಲರ ಮೊರೆ ಹೋಗಿ ಸಂಪ್ರದಾಯಕವಾಗಿ ಮದುವೆ ಮಾಡಿಕೊಂಡ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಿದ್ಯಾನಗರದಲ್ಲಿ ಈ ವಿಶೇಷ ಮದುವೆ ಜರುಗಿದ್ದು, ಈ ಮದುವೆಗೆ ಪೊಲೀಸರು ಸಾಕ್ಷಿಯಾದ್ರು. ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಮದ ನಿರಂಜನಾ…

Read More