ಕಬ್ಬಿಗೆ ಬೆಂಬಲ ಬೆಲೆ ನೀಡಿ ರೈತರ ಕ್ಷಮೆಯಾಚಿಸಿ : ವಿರುಪಾಕ್ಷಪ್ಪ ಸಿಂಗನಾಳ

ರೈತರ ಕಾಳಜಿವಹಿಿಸದ ನಕಲಿ ಮಣ್ಣಿನ ಮಕ್ಕಳು| ಕೊಪ್ಪಳ, ನ.೨೧: ಮಾತೆತ್ತಿದರೆ ಮಣ್ಣಿನ ಮಕ್ಕಳು ಎಂದು ಉದ್ದುದ್ದ ಭಾಷಣ ಮಾಡುವ ಜೆಡಿಎಸ್ ಪಕ್ಷದ ನಾಯಕರು ಕಬ್ಬು ಬೆಳೆಯ ರೈತರ ಬೇಡಿಕೆಗೆ ಸ್ಪಂದಿಸಿ ಸಮಸ್ಯೆ ನೀವಾರಿಸುವಲ್ಲಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಕಾಳಜಿವಯಿಸದೇ ನಕಲಿ ಮಣ್ಣಿನ ಮಕ್ಕಳಾಗಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಸಿಂಗನಾಳ ವ್ಯಂಗ್ಯವಾಡಿದರು. ಅವರು ಭಾರತೀಯ ಜನತಾ ಪಕ್ಷ ಕೊಪ್ಪಳ ವಿಧಾನಸಭಾ ಕ್ಷೇತ್ರ ವತಿಯಿಂದ ಬುಧವಾರದಂದು ನಗರದ ಸಾರ್ವಜನಿಕ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿದರು. ರೈತರನ್ನು ಗುಂಡಾಗಳು, ರೈತ ಮಹಿಳೆಗೆ ಎಲ್ಲಿ ಮಲಗಿದ್ದೆ ಎಂಬ ಶಬ್ದ ಬಳಸಿದ್ದು ನಾಚಿಕೆಗೇಡಿನ ಸಂಗತಿಯಾಗಿದೆ. ಬೆಳಗಾವಿ, ಬಾಗಲಕೋಟ, ವಿಜಾಪುರ, ಹಾಸನ, ಮಂಡ್ಯ ಸೆರಿದಂತೆ ಅನೇಕ ಜಿಲ್ಲೆಗಳ ರೈತರು ತಮ್ಮ ನ್ಯಾಯಸಮ್ಮತವಾದ ಬೇಡಿಕೆ ಈಡೇರಿಕೆಗೆ ಪ್ರತಿಭಟಿಸಲು ಆಗದ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ. ಕೂಡಲೇ ಕಬ್ಬಿನ ಬಾಕಿ ಹಣವನ್ನು ರೈತರ ಖಾತೆಗಳಿಗೆ ಜಮಾ ಮಾಡುವಲ್ಲಿ…

Read More