ಬೇಸಿಗೆ ಹಂಗಾಮಿಗೆ 22.52 ಟಿ.ಎಂ.ಸಿ ನೀರು ಬಳಕೆಗೆ ತುಂಗಭದ್ರಾ ಜಲಾಶಯ ಸಲಹಾ ಸಮಿತಿಯಲ್ಲಿ ನಿರ್ಧಾರ

ಕೊಪ್ಪಳ,ನವಂಬರ್.– ತುಂಗಭದ್ರಾ ಜಲಾಶಯದಿಂದ ರಾಜ್ಯದ ಪಾಲಿನ ನೀರನ್ನು ಬೇಸಿಗೆ ಹಂಗಾಮಿಗೆ ಬಳಕೆ ಮಾಡಲು ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ವಿಸ್ತøತವಾಗಿ ಚರ್ಚಿಸಿ ತೀರ್ಮಾನಿಸಲಾಯಿತು. ನವಂಬರ್ 18 ರಂದು ಮುನಿರಾಬಾದ್ ಕಾಡಾ ಕಚೇರಿಯಲ್ಲಿ ಪಶುಸಂಗೋಪನಾ ಹಾಗೂ ಮೀನುಗಾರಿಕೆ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ನಾಡಗೌಡರವರ ಅಧ್ಯಕ್ಷತೆಯಲ್ಲಿ ನೀರಾವರಿ ಸಲಹಾ ಸಮಿತಿ ನಡೆಯಿತು. ಪ್ರಸಕ್ತ ವರ್ಷ ತುಂಗಭದ್ರಾ ಜಲಾಶಯಕ್ಕೆ 357.63 ಟಿ.ಎಂ.ಸಿ. ನೀರು ಹರಿದು ಬಂದಿದ್ದು ಇದರಲ್ಲಿ 194.97 ಟಿ.ಎಂ.ಸಿ. ನೀರನ್ನು ಹೆಚ್ಚುವರಿಯಾಗಿ ಹೊರಬಿಡಲಾಗಿದೆ. ಉಳಿದ 162.65 ಟಿ.ಎಂ.ಸಿ. ನೀರಿನಲ್ಲಿ 11.65 ನೀರು ಆವಿಯಾಗಿ ಬಳಕೆಯಾಗಿರುತ್ತದೆ. ಬಳಕೆಗೆ 151 ಟಿ.ಎಂ.ಸಿ. ಉಳಿತಾಯವಾಗಿದ್ದು ಇದರಲ್ಲಿ ರಾಜ್ಯದ ಪಾಲು 98.99 ಟಿ.ಎಂ.ಸಿ ಇರುತ್ತದೆ. ಇದರಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆದ ಬೆಳೆಗಳಿಗೆ ನೀರು ನೀಡಿದ್ದು ನವಂಬರ್ ಅಂತ್ಯದವರೆಗೆ ಹರಿಸಬೇಕಿರುವುದರಿಂದ ರಾಜ್ಯದ ಪಾಲಿನ ನೀರಿನಲ್ಲಿ 76.46 ಟಿ.ಎಂ.ಸಿ.…

Read More