– ಮಕ್ಕಳೆ ದೇಶದ ಆಸ್ತಿ- ಪಿಐ ಶಿವಾನಂದ ವಾಲಿಕಾರ್

ದೇಶದ ಭವಿಷ್ಯ ಮಕ್ಕಳ ಕೈಯಲ್ಲಿದೆ – ಮಾಸ್ತಿ ಇಂಗ್ಲೀಷ್ ಮಿಡಿಯಮ್ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಕೊಪ್ಪಳ :  ಮಕ್ಕಳೆ ದೇಶದ ಆಸ್ತಿ, ದೇಶದ ಭವಿಷ್ಯ ಮಕ್ಕಳ ಕೈಯಲ್ಲಿದೆ ಎಂದು ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಟೇಕ್ಟರ್ ಶಿವಾನಂದ ವಾಲಿಕಾರ್ ಹೇಳಿದರು. ನಗರದ ಗವಿಮಠ ಹತ್ತಿರವಿರುವ ಮಾಸ್ತಿ ಇಂಗ್ಲೀಷ್ ಮಿಡಿಯಮ್ ಶಾಲೆಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳು ಉತ್ತಮವಾದ ಸಂಸ್ಕಾರ ಪಡೆದು ಸಮಾಜಕ್ಕೆ ಮಾದರಿಯಾಗುವಂತ ನಾಗರೀಕನಾಗಿ ಬದುಕು ಸಾಗಿಸಬೇಕು. ಅಲ್ಲದೇ  ಉನ್ನತ ಶಿಕ್ಷಣ ಪಡೆದು ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಬೇಕು. ಹಿರಿಯರಿಗೆ ಗೌರವಿಸುವುದನ್ನು ಕಲಿತುಕೊಳ್ಳಬೇಕು. ನಿಮ್ಮ ಸಾಧನೆಯ ಹಿಂದೆ ನಿಮ್ಮ ತಂದೆ-ತಾಯಿಯ ಅಗಾ` ಪರಿಶ್ರಮವಿರುತ್ತದೆ. ಹೀಗಾಗಿ ಅವರನ್ನು ಕೊನೆಯವರೆಗೆ ಜೋಪಾನವಾಗಿ ಗೌರವಪೂರ್ವಕವಾಗಿ ನಡೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಹಿರಿಯ ಪತ್ರಕರ್ತ ಚಾಮರಾಜ ಸವಡಿ ಅವರು ಮಕ್ಕಳು ಪ್ರತಿಯೊಂದು ಕ್ಷಣಗಳ್ನನು ಸಂತಸದಿಂದ…

Read More