ಕುರುಬರ ಮೇಲಿನ ದೌರ್ಜನ್ಯ ನಿಲ್ಲಲಿ-ಜಿಲ್ಲಾ ಹಾಲುಮತ ಮಹಾಸಭಾ ಸಂಘಟನೆ ಆಗ್ರಹ

ಕೊಪ್ಪಳ: ರಾಜ್ಯದಲ್ಲಿ ಕುರುಬ ಸಮುದಾಯದವರ ಮೇಲೆ ನಿರಂತರವಾಗಿ ದೈಹಿಕ ಹಾಗೂ ಮಾನಸಿಕ ದೌರ್ಜನ್ಯಗಳು ನಡೆಯುತ್ತಿವೆ. ಇವು ದಿನೇ ದಿನೇ ಹೆಚ್ಚುತ್ತಿವೆ. ಇದರಿಂದ ಭಯದ ವಾತಾವರಣದಲ್ಲಿ ಕುರುಬ ಸಮಾಜದ ಬಾಂಧವರು ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಇಂಥಹ ದೌರ್ಜನ್ಯ ಪ್ರಕರಣಗಳು ನಡೆಯದಂತೆ ಕಾನೂನು ಕ್ರಮ ಜರುಗಬೇಕೆಂದು ಜಿಲ್ಲಾ ಹಾಲುಮತ ಮಹಾಸಭಾ ಸಂಘಟನೆ ಆಗ್ರಹಿಸಿದೆ. ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ ಅವರ ಮೂಲಕ ಮುಖಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಹಾಲುಮತ ಮಹಾಸಭಾ ವತಿಯಿಂದ ಶನಿವಾರ ಮನವಿ ಸಲ್ಲಿಸಲಾಯಿತು. ಹಾಲುಮತ ಮಹಾಸಭಾ ಜಿಲ್ಲಾಧ್ಯಕ್ಷ ಹನುಮಂತಪ್ಪ ಕೌದಿ ಮಾತನಾಡಿ, ವಾಲ್ಮೀಕಿ ಜನಾಂಗದವರು ಎಂದು ಹೇಳಿಕೊಂಡು ಕೆಲವರು ಕುರುಬ ಸಮುದಾಯದ ಬಗ್ಗೆ ಅತ್ಯಂತ ಅಶ್ಲೀಲ ಹಾಗೂ ಅವಹೇಳನಕಾರಿ ಭಾಷೆ ಬಳಕೆ ಮಾಡಿ ಆಡಿಯೋ ಹಾಗೂ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ವಾಟ್ಸಾಪ್‌ಗಳಲ್ಲಿ ಹರಿಬಿಡುತ್ತಿದ್ದಾರೆ. ಇದರಿಂದ ಸಮಾಜದಲ್ಲಿ ಗೊಂದಲ, ಗಲಭೆ, ಸಂಘರ್ಷಗಳು ಹೆಚ್ಚುತ್ತಿವೆ. ಸಮಾಜದಲ್ಲಿ ಎರಡೂ ಜನಾಂಗದವರು ಸಹೋದರರಂತೆ ಬದುಕುತ್ತಿದ್ದು…

Read More