ಮಾನವ ಕುಲದ ಒಳಿತಿಗಾಗಿ ಮಾರ್ಕ್ಸವಾದದ ಅಗತ್ಯತೆ ಇದೆ-ಎಂ.ಎ ಬೇಬಿ

ಕೇರಳದ ಮಾಜಿ ಶಿಕ್ಷಣ ಸಚಿವ ಎಂ.ಎ ಬೇಬಿ ಇಂದು ಕೊಪ್ಪಳದಲ್ಲಿ ಸಿಪಿಐ(ಎಂ)ನ ರಾಜ್ಯ ಅಧ್ಯಯನ ಶಿಬಿರದ ಮೂರನೇ ದಿನದ ಕಾರ್ಯಕ್ರಮ ಉದ್ಘಾಟಿಸಿದರು. ಕೇರಳದ ಮಾಜಿ ಶಿಕ್ಷಣ ಸಚಿವರ ಅಭಿಮತ :- ‘ಮಾನವ ಕುಲದ ಒಳಿತಿಗಾಗಿ ಮಾರ್ಕ್ಸವಾದದ ಅಗತ್ಯತೆ ಇದೆ’ ಎಂದು ಪೋಲಿಟ್ ಬ್ಯೂರೋ ಸದಸ್ಯ ಹಾಗೂ ಕೇರಳದ ಮಾಜಿ ಶಿಕ್ಷಣ ಸಚಿವ ಎಂ.ಎ ಬೇಬಿ ಹೇಳಿದರು. ಕಾರ್ಲ್ ಮಾರ್ಕ್ಸ್ ರ ದ್ವಿ ಶತಮಾನೋತ್ಸವದ ಅಂಗವಾಗಿ ಭಾನುವಾರ ನಗರದಲ್ಲಿ ಕಾರ್ಲ್ ಮಾರ್ಕ್ಸ್ ರವರ ಹೇಳಿಕೆಗಳಿರುವ ಪೋಸ್ಟರ್ ಗಳ ಪ್ರದರ್ಶನದ ಉದ್ಘಾಟನೆ ಹಾಗೂ ಐದು ದಿನಗಳ ಕಾಲ ನಡೆಯುತ್ತಿರುವ ಸಿಪಿಐ(ಎಂ) ನ ರಾಜ್ಯ ಅಧ್ಯಯನ ಶಿಬಿರದ ಮೂರನೇ ದಿನದ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು. ‘ಮನುಷ್ಯನ ಮಟ್ಟಿಗೆ ಮನುಷ್ಯನೇ ಅತ್ಯುನ್ನತ ಜೀವಿಯಾಗಿದ್ದು, ಯಾವುದೇ ಪ್ರಶ್ನೆಯನ್ನಾದರೂ ಧಾರ್ಮಿಕ ದೃಷ್ಟಿ ಕೋನದಿಂದ ನೋಡದೆ, ಲೌಕಿಕ ದೃಷ್ಟಿಯಿಂದ ನೋಡಿ ಪರಿಹಾರ ಕಂಡು ಕೊಳ್ಳಬೇಕು’ ‘ಸ್ವರ್ಗ…

Read More