ಬ್ರೀಟಿಷರ ಕನಸಿನಲ್ಲೂ ಕಾಡಿದ ಕದನ ಕವಿ ಟಿಪ್ಪು ಸುಲ್ತಾನ : ಎಂ. ನಂಜುಂಡಸ್ವಾಮಿ

ಕೊಪ್ಪಳ ನ. ಬ್ರೀಟಿಷರ ಕನಸಿನಲ್ಲೂ ಕಾಡಿದ ಕದನ ಕವಿ ಹಜರತ್ ಟಿಪ್ಪು ಸುಲ್ತಾನ್ ಎಂದು ಬೆಂಗಳೂರಿನ ಅಪರ ಪೊಲೀಸ್ ಆಯುಕ್ತರಾದ ಎಂ. ನಂಜುಂಡಸ್ವಾಮಿ ಅವರು ಹೇಳಿದರು. ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಅಂಗವಾಗಿ ನಗರದ ಸಾಹಿತ್ಯ ಭವನದಲ್ಲಿ ಶನಿವಾರದಂದು ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿ ಅವರು ಮಾತನಾಡಿದರು. ಟಿಪ್ಪು ಸುಲ್ತಾನ್ ಒಬ್ಬ ಕನ್ನಡ ನಾಡಿನ ದೊರೆ ಯಾಗಿದ್ದರು. 40 ಸಾವಿರ ಚದರು ಅಡಿ ಇದ್ದ ಮೈಸೂರು ಸಾಮ್ರಾಜ್ಯವನ್ನು 80 ಸಾವಿರ ಚ.ಅ.ಕ್ಕೆ ವಿಸ್ತರಿಸಿದರು. ಹೈದರ ಅಲಿಯ ಗಂಡುಗಲಿ ಮಗ, ದ್ರಾವಿಡ ದೇಶದ ಇತಿಹಾಸದಲ್ಲಿ ಹೊಳೆಯುವ ರತ್ನ ಹಜರತ್ ಟಿಪ್ಪು ಸುಲ್ತಾನ್. ಮೈಸೂರಿನ ಇತಿಹಾಸದಲ್ಲಿ ಮರೆಯಲಾಗದ ಚಿನ್ನ, ನಮ್ಮ ಕರುನಾಡಿನ ಯುವಕರ ನರ-ನಾಡಿಯಲ್ಲಿ ವೀರತ್ವ ತುಂಬುವವರೇ ಟಿಪ್ಪು ಸುಲ್ತಾನ. ಇಂತಹ ಮಹಾನ ವ್ಯಕ್ತಿಯನ್ನು ನೆನಪಿಸಿಕೊಳ್ಳದಿದ್ದರೆ ನಾವು ನಮ್ಮ ತಾಯಿ ನಾಡಿನ ಪ್ರೀತಿಯನ್ನು ಮರೆತಂತೆ.…

Read More