ಹೊನ್ನುಣಿಸಿ ಕ್ರಾಸ್ ಅಚ್ಚುಕಟ್ಟು ನಾಟಕ ಪ್ರದರ್ಶನ

ಮನಸ್ಸಿನ ಕ್ರಾಸ್, ಜೀವನದ ಕ್ರಾಸ್, ಸಂಬಧದ ಕ್ರಾಸ್, ಈ ಪ್ರದರ್ಶನದಲ್ಲಿರುವ ಸಾಕಷ್ಟು ಅಂಶಗಳು ಮತಭೇದ, ಬ್ರಷ್ಟಾಚಾರ, ಪ್ರಸ್ತುತ ಯುವಕರ ಮೇಲಿನ ಮಾನಸಿಕ ಒತ್ತಡಗಳು, ಗ್ರಾಮಿಣ ಪ್ರದೇಶದಲ್ಲಿ ನಡೆಯುವ ಕುಟುಂಬೇತರ ಘಟನೆಗಳನ್ನ ರಂಗಶಾಲೆಯ ನಟರುಗಳು ತಮ್ಮ ಸ್ವಂತ ಕಥೆಗಳ ಆಧಾರಿತ ತಮ್ಮ ಪ್ರತಿರೋಧಗಳ ‘ಹೊನ್ನುಣಿಸಿ ಕ್ರಾಸ್’ ಬಹಳ ಅಚ್ಚುಕಟ್ಟಾಗಿ ಯಾವುದೇ ಆಡಂಬರದ ಸಂಗೀತವಿಲ್ಲದೆ ದೇಹ, ಭಾವ, ಕವಿತೆಗಳು, ದೃಶ್ಯಸಂಯೋಜನೆಗಳು ನಮ್ಮನ್ನು ಸೆಳೆದವು ಎಂದು ಸಾಹಿತಿ ಕಳಕೇಶ ಬಡಿಗೇರ ನುಡಿದರು.ನಾಟಕದ ಕೊನೆಯ ದೃಶ್ಯದ ಮಾತು, ಗಂಗೆಯಲ್ಲಿ ಮುಳುಗಿದವರು ನಮ್ಮವರು, ಆದರೆ ದೋಣಿಗೆ ತೂತು ಹಾಕಿದವರು ಯಾರು ನೀಜ ಹೇಳು ಎಂಬ ಮಾತು ಎಲ್ಲರ ಮನಮುಟ್ಟಿತು. ನಿನ್ನೆ ಚಿಕ್ಕಬಿಡನಾಳ ಗ್ರಾಮದ ವಿಸ್ತಾರ್ ರಂಗಶಾಲೆಯ ರಂಗಕಲಿಕಾರ್ತಿಗಳಿಂದ ಮೂರುದಿನಗಳ ಪ್ರದರ್ಶನ ಯಶಸ್ವಿಯಾಗಿ ಕೊನೆಯ ದಿನದ “ಹೊನ್ನುಣುಸಿ ಕ್ರಾಸ್” ನಾಟಕ ಪ್ರದರ್ಶನ ಕಂಡಿತು. ಅದರಲ್ಲೂ ವಿಶೇಷವಾಗಿ ಯುವಕನ್ನು, ಮಕ್ಕಳನ್ನು, ಮಾತನಾಡುವಂತೆ ಪ್ರದರ್ಶಿಸಲ್ಪಟ್ಟಿತು. ಥೇಟರ್ ಮೇಕಿಂಗ್ ಪ್ರೋಡಕ್ಷನ್…

Read More