ಅಭಿನವ ಶ್ರೀಗಳಿಂದ ಕೊಪ್ಪಳ ಕನಸು ಪತ್ರಿಕೆ ಬಿಡುಗಡೆ.

ಕೊಪ್ಪಳ- 04- ಕೊಪ್ಪಳ ಕನಸು ಕನ್ನಡ ಮಾಸ ಪತ್ರಿಕೆಯ ಬಿಡುಗಡೆ ನಗರದ ಗವಿಮಠದಲ್ಲಿ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಬಿಡುಗಡೆಗೊಳಿಸಿದರು. ಪತ್ರಿಕೆ ಬಿಡುಗಡೆ ಬಳಿಕ ಮಾತನಾಡಿದ ಶ್ರೀಗಳು ಕೊಪ್ಪಳ ಕನಸು ಮಾಸ ಪತ್ರಿಕೆ ಸುಸಂಸ್ಕೃತವಾಗಿ ಹೊರಬರಲಿ, ಓದುಗರ ಮನದಲ್ಲಿ ಭಾವೈಕ್ಯತೆ ಮೂಡಿಸಲಿ ಜ್ಞಾನವನ್ನು ಹೆಚ್ಚಿಸುವ ಹಾಗೂ ವರ್ತಮಾನವನ್ನು ತಿಳಿಸಿಕೊಡುವ ಪತ್ರಿಕೆಗಳನ್ನು ವಿದ್ಯಾರ್ಥಿಗಳು ಓದಿದಾಗ ಜೀವನದ ಮೌಲ್ಯಗಳು ತಿಳಿಯುತ್ತವೆ ಎಂದು ಅಭಿನವ ಗವಿಶ್ರೀಗಳು ಸ್ವಾಮಿಜಿ ಹೇಳಿ ಪತ್ರಿಕೆ ಗೇ ಹಾರೈಸಿದರು. ಬಸವರಾಜ ಮರದೂರ ಅವರ ಸಂಪಾದಕತ್ವದಲ್ಲಿ ಕೊಪ್ಪಳ ಕನಸು ಮಾಸ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಓದುವ ಹವ್ಯಾಸ ಬೆಳೆಸಿಕೊಂಡಾಗ ಜ್ಞಾನದ ವೃದ್ದಿಗೆ ಸಹಕಾರಿಯಾಗುತ್ತದೆ ಓದುವುದರಿಂದ ಬರವಣಿಗೆಯ ಆಸಕ್ತಿ ಮೂಡುತ್ತದೆ ಆಗ ಓದುಗ ಒಬ್ಬ ಸಾಹಿತಿ, ಬರಹಗಾರನಾಗಲು ಸಾಧ್ಯ. ಇತ್ತೀಚೆಗೆ ಓದುಗರ ಕೊರತೆಯಿಂದಾಗಿ ಪತ್ರಿಕೆಗಳ ಪ್ರಸಾರ ಸಂಖ್ಯೆ ಕಡಿಮೆಯಾಗುತ್ತಿದೆ. ಪತ್ರಿಕೆಗಳು ಸಾಮಾನ್ಯ ಜ್ಞಾನ ನೀಡುವ ಹಾಗೂ ಸಮಾಜದ ಸುದ್ದಿಗಳನ್ನು ತಿಳಿಸುವ…

Read More