ಅಗ್ನಿ ಆಕಸ್ಮಿಕ : ಜೋಳಿಗೆಯಲ್ಲಿ ಮಲಗಿದ್ದ ಮಗು ಸಜೀವ ದಹನ

Koppal News : ಅಗ್ನಿ ಆಕಸ್ಮಿಕದಿಂದ ಗುಡಿಸಲಿಗೆ ಬೆಂಕಿ ಬಿದ್ದು ಗುಡಿಸಲಲ್ಲಿ ಜೋಳಿಗೆಯಲ್ಲಿ ಮಲಗಿದ್ದ ಮಗು ಸಜೀವ ದಹನವಾದ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ತರಲಕಟ್ಟಿ ತಾಂಡಾದಲ್ಲಿ ಘಟನೆ ನಡೆದಿದ್ದು. ಎಂಟು ತಿಂಗಳು ಮಹೇಶ್ ಸಜೀವವಾಗಿ ಸುಟ್ಟು ಕರುಕಲಾಗಿರುವ ಮಗು… ಮಗುವನ್ನು ಗುಡಿಸಲಿನಲ್ಲಿ ಜೋಳಿಗೆಯಲ್ಲಿ ಮಲಗಿಸಿ ಹೊಲದಲ್ಲಿ ಜಮೀನಿಗೆ ತೆರಳಿದ್ದ ಮನೆಯವರು… ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ‌ ಹೊತ್ತುಕೊಂಡಿರೊ ಶಂಕೆ ವ್ಯಕ್ತವಾಗಿದೆ. ನಿಂಗಪ್ಪ,ಸುನೀತಾ ದಂಪತಿಯ 8 ತಿಂಗಳು ಮಗು.ಬೇವೂರು ಪೊಲೀಸರು ಸ್ಥಳಕ್ಕೆ ಬೇಟಿ ಪರಿಶೀಲನೆ ನಡೆಸಿದ್ದಾರೆ. ಬೇವೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ. ನಡೆದಿದೆ.

Read More