ಆದಿ ಜಾಂಬವ -ಜಂಬೂದ್ವೀಪೇ- ಭರತ ಖಂಡೇ – ಭರ್ತವರ್ಷೇ ಏನಿದರ ಅರ್ಥ ?! -ಡಾ.ವಡ್ಡಗೆರೆ ನಾಗರಾಜಯ್ಯ 

ಆದಿ ಜಾಂಬವ ಅಥವಾ ಮಹಾ ಆದಿಗ: (ಭಾಗ -1) ಆದಿಜಾಂಬವನು ಮಾದಿಗರ ಮೂಲ ಪುರುಷ. ಜಾನಪದ ಮೌಖಿಕ ಪುರಾಣಕಾವ್ಯಗಳ ಪ್ರಕಾರ ಅವನು ವಿಶ್ವಸೃಷ್ಡಿಗೂ ಆರು ತಿಂಗಳು ಮೊದಲೇ ಹುಟ್ಟಿದ ಆದಿ ಪುರುಷ. ವಿಶ್ವವನ್ನು ತಾನೆ ಸೃಷ್ಟಿಸಿದ ಆದಿ ವ್ಯಕ್ತಿಯಾದ ಕಾರಣ “ಆದಿಗ”. ವಿಶ್ವಸೃಷ್ಟಿಗೂ ಮೊದಲೇ ಈತನಿದ್ದ ಕಾರಣ ” ಮಹಾ ಆದಿಗ” ಆಗಿದ್ದಾನೆ. ಮಹಾಆದಿಗ ವ್ಯಕ್ತಿಯು ಮಾದಿಗ ಆಗಿ ಮತ್ತು ಅವನ ಸಂತತಿಯವರು ಮಾದಿಗರಾಗಿ ನಾಮಾಂಕಿತರಾಗಿದ್ದಾರೆ.  ಆದಿಜಾಂಬವನೇ ಜಂಬೂದ್ವೀಪದ ಆದಿ ಮಾದಿಗ. ಭಾರತ ದೇಶದ ಪ್ರಾಚೀನ ಹೆಸರು ಜಂಬೂದ್ವೀಪ. ಜಂಬೂವ ಅರ್ಥಾತ್ ಜಾಂಬವನು ಭಾರತ ದೇಶದ ಎಲ್ಲಾ ಜೀವಿಗಳಿಗೆ ಮತ್ತು ಜನಾಂಗಗಳಿಗೆ ಹಿರಿಯವನಾಗಿ ಮೊದಲೇ ಹುಟ್ಟಿದ ಪಿತಾಮಹನಾದ್ದರಿಂದ ಇವನನ್ನು ‘ ಆದಿ ತಾತ ಅಥವಾ ತಾತ ಜಾಂಬವ’ ಎಂದು ಕರೆಯುತ್ತಾರೆ. ಎಮ್ಮಾ ರೋಶಾಂಬು ಕ್ಲೌ ಹೇಳುವಂತೆ “Aryans made their conquests, and this man Adi…

Read More