ಡಿಸೇಲ್ ಬ್ಯಾರಲ್ ಬ್ಲಾಸ್ಟ್ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಗಂಭೀರ ಗಾಯ

ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ಪರಶೀಲನೆಗೆ ತೆರಳಿದ್ದ ಸಮಯದಲ್ಲಿ ಡಿಸೇಲ್ ಬ್ಯಾರಲ್ ಬ್ಲಾಸ್ಟ್ ಆದ ಪರಿಣಾಮ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಬ್ಬರು ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ. ಜಿಲ್ಲೆಯ ಯಲಬುರ್ಗಾ ತಾಲೂಕಿನ ಲಿಂಗನಬಂಡಿ ಗ್ರಾಮ ಬಳಿಯ ಬೆಟ್ಟದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಾದ ದಿನೇಶ್ ಹಾಗೂ ನವೀನ್ ಕುಮಾರ್ ಎಂಬುವವರು ಇಂದು ಪರಿಶೀಲನೆಗೆ ತೆರಳಿದ್ದರು. ಲಿಂಗನಬಂಡಿ ಬೆಟ್ಟದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ ಎಂಬ ದೂರು ಬಂದಿದ್ದ ಹಿನ್ನೆಲೆಯಲ್ಲಿ ಈ ಇಬ್ಬರು ಅಧಿಕಾರಿಗಳು ಪರಿಶೀಲನೆಗೆ ತೆರಳಿದ್ದರು. ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ಈ ಇಬ್ಬರು ಅಧಿಕಾರಿಗಳು ಬಂದಿದ್ದನ್ನು ಕಂಡು ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದವರು ಓಡಿ ಹೋಗಿದ್ದಾರೆ. ಆಗ ಈ ಅಧಿಕಾರಿಗಳು ಅಲ್ಲಿದ್ದ ಡಿಸೇಲ್ ಬ್ಯಾರಲ್ಅನ್ನು ಒದ್ದಿದ್ದಾರೆ. ಬಿಲಿಸಿನ ಪರಿಣಾಮದಿಂದ ಅದು ಬ್ಲಾಸ್ಟ್ ಆಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಇನ್ನೊಂದು ಮಾಹಿತಿ…

Read More