ಅಳವಂಡಿ ಹೋಬಳಿಗೆ ಮೂಲಭೂತ ಸೌಲಭ್ಯ ಒದಗಿಸಲು ಕರವೇ ಯುವಸೈನ್ಯ ಅಗ್ರಹ

ಕೊಪ್ಪಳ : ಅಳವಂಡಿ ಹೋಬಳಿಯು ನಿರ್ಲಕ್ಷಕ್ಕೆ ಒಳಗಾಗಿದ್ದು ಮತ್ತು ನಿರಂತರವಾದ ಬರಗಾಲ ತಾಂಡವಾಡುತ್ತಿರುವದರಿಂದ ಜನರು ತತ್ತರಿಸಿ ಹೋಗಿದ್ದು ಮತ್ತು ಅಳವಂಡಿಯ ಹೋಬಳಿಯಲ್ಲಿ ಪಶು ವೈದ್ಯಾಧಿಕಾರಿಗಳು ಇಲ್ಲದೇ ಇರುವದರಿಂದ ಧನ ಕರುಗಳಿಗೆ ತಿವ್ರ ಹಾನಿಯುಂಟಾಗುತ್ತಿದ್ದು ಮತ್ತು ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು ಮತ್ತು ಕರೆಗೆ ನೀರು ತುಂಬಿಸುವದು . ಮತ್ತೆ ಬರಗಾಲ ಇರುವದರಿಂದ ಈ ಭಾಗದಲ್ಲಿ ಗೋಶಾಲೆಯನ್ನು ತೆರೆಯುವದು ಸೇರಿದಂತೆ ಇನ್ನಿತರ ಮೂಲಭೂತ ಸಮಸ್ಯೆಗಳು ತಾಂಡವಾಡುತ್ತಿರುವದರಿಂದ ಜನರ ತತ್ತರಗೊಂಡಿದ್ದು ಕೂಡಲೇ ಜಿಲ್ಲಾಡಳಿತ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಕರವೇ ಯುವಸೈನ್ಯ ಅಪರ ಜಿಲ್ಲಾಧಿಕಾರಿಗಳು ಶ್ರೀಮತಿ ಗೀತಾ ಅವರಿಗೆ ಮನವಿ ನೀಡಿದರು. ಮನವಿ ನೀಡಿ ಮಾತನಾಡಿದ ಸಂಘಟಿಕರು ಅಳವಂಡಿ ಹೋಬಳಿಯು ತಿವ್ರ ಬರಗಾಲದಿಂದ ಜನರು ತತ್ತರಿಸಿದ್ದು ಉದ್ಯೋಗ ಇಲ್ಲದೇ ದುಡಿಯಲು ಗುಳೆ ಹೋಗುತ್ತಿದ್ದು ಕೂಡಲೇ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೊಳಿಸಿ ಜನರಿಗೆ ಉದ್ಯೋಗ ಕೊಡಬೇಕು ಮತ್ತು ಈ ಹೋಬಳಿಯಲ್ಲಿ…

Read More