ಶಾಸಕ ಪರಣ್ಣ ಮುನವಳ್ಳಿಗೆ ಸ್ಕೆಚ್ ಹಾಕಿದ್ದು ಯಾರು ಗೊತ್ತಾ?

ಜೀವಬೆದರಿಕೆ ಹಾಕಿ ಬ್ಲಾಕ್ ಮೇಲ್ ಗೆ ಇಳಿದ ಬಿಜೆಪಿಯ ಮುಖಂಡ, ಜೊತೆ ಸೇರಿದವರ್ಯಾರು ಗೊತ್ತಾ? ಕೊಪ್ಪಳ :  ಇತ್ತೀಚಿಗಷ್ಟೇ ಶಾಸಕ ಪರಣ್ಣ ಮುನವಳ್ಳಿಗೆ ಜೀವ ಬೆದರಿಕೆಯ ಕರೆ ಬಂದಿತ್ತು, ಮನೆಗೆ ಬಂದು ಬೆದರಿಕೆಯ ಪತ್ರ ಕೊಟ್ಟು ಜೊತೆಗೆ ಕವರ್ ನಲ್ಲಿ ಖೋಟಾನೋಟು ಕೊಟ್ಟು ಹೋಗಿದ್ದರು. ಇದರಿಂದ ಕಂಗಾಲಾಗಿದ್ದ ಶಾಸಕ ಪೋಲಿಸರಿಗೆ ದೂರು ಕೊಟ್ಟಿದ್ದರು. ಪ್ರಕರಣದ ಜಾಡು ಹಿಡಿದು ಹೊರಟ ಪೋಲಿಸರಿಗೆ ಶಾಕ್ ಕಾದಿತ್ತು ಕೈ ಹಾಕಿದ್ದು ಮೀನುಗಳಿಗಾಗಿ ಆದರೆ ಸಿಕ್ಕಿದ್ದು ಮೊಸಳೆಗಳು, ತಿಮಿಂಗಲಗಳು ..ಗಂಗಾವತಿಯ ಶಾಸಕ ಪರಣ್ಣ ಮುನವಳ್ಳಿಗೆ ಕೊಲೆ ಬೆದರಿಕೆ ಹಾಗೂ ಬ್ಲಾಕ್ ಮೇಲ್ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೊಪ್ಪಳ ಪೋಲಿಸರು  10 ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.   ಗಂಗಾವತಿಯ ಶಾಸಕ ಪರಣ್ಣ ಮುನವಳ್ಳಿಯ ಮನೆಗೆ ಬಂದಿದ್ದ ದುಷ್ಕರ್ಮಿಗಳು ಬೆದರಿಕೆಯ ಪತ್ರದೊಂದಿಗೆ ಖೋಟಾನೋಟು ಕೊಟ್ಟು ಹೋಗಿದ್ದರು ಅಷ್ಟೇ ಸಾಲದು ಎಂಬಂತೆ ಮರುದಿನ ಫೋನ್ ಮಾಡಿ ಬೆದರಿಕೆಯ ಕರೆ…

Read More