ಪ್ರಾಮಾಣಿಕ ಹೋರಾಟ ವರ್ಸಸ್ ಜಾತಿ,ಪಕ್ಷ ಮತ್ತು ದುಡ್ಡು

ಈ ಚುನಾವಣೆ ಪ್ರಾಮಾಣಿಕ ಜನಪರ ಹೋರಾಟ, ಸೇವೆಯ ಸತ್ವಪರೀಕ್ಷೆಯಾಗಿದೆ . ನಿಸ್ವಾರ್ಥದಿಂದ ಹೋರಾಟ ಮಾಡಿ ಪ್ರಾಮಾಣಿಕ ಪ್ರಯತ್ನ ಮಾಡಿ ಸೇವೆ ಮಾಡುತ್ತಿರುವ ಡಾ.ರಜಾಕ್ ಉಸ್ತಾದ್ ಗೆಲುವು ಈ ಭಾಗದ ಪದವೀಧರರ ಜನಪರ ನಿಲುವಿನ, ಅಭಿವೃದ್ದಿ ಪರ ಚಿಂತನೆಯ ಗೆಲುವಾಗಲಿದೆ. ಈ ಚುನಾವಣೆಯಲ್ಲಿ ಪ್ರಾಮಾಣಿಕ ಹೋರಾಟ ಗೆಲ್ಲುತ್ತೋ ಅಥವಾ ಜಾತಿ,ಪಕ್ಷ ಮತ್ತು ದುಡ್ಡು ಗೆಲ್ಲುತ್ತೋ ಎನ್ನುವುದು ಕುತೂಹಲದ ಪ್ರಶ್ನೆಯಾಗಿದೆ. ಕೊಪ್ಪಳ : ಇತ್ತೀಚಿನ ದಿನಗಳಲ್ಲಿ ಚುನಾವಣೆಗಳಲ್ಲಿ ಗೆಲ್ಲಬೇಕಾದರೆ ನಿಮ್ಮ ಹತ್ತಿರ ದುಡ್ಡು ಇರಬೇಕು, ಪಕ್ಷದ ಬಲವಿರಬೇಕು ಅದಕ್ಕಿಂತ ಮುಖ್ಯವಾಗಿ ಜಾತಿ ಇರಬೇಕು ಎನ್ನುವುದು ಪದೇ ಪದೇ ಸಾಭೀತಾಗುತ್ತಲೇ ಬಂದಿದೆ. ಇದು ಎಲ್ಲಾ ಚುನಾವಣೆಗಳಲ್ಲೂ ಕಂಡು ಬರುತ್ತಿರುವ ಸತ್ಯ. ಈ ರೋಗ ಈಗ ಶಿಕ್ಷಕರ ಕ್ಷೇತ್ರಕ್ಕೂ , ಪದವೀಧರ ಕ್ಷೇತ್ರಕ್ಕೂ ಕಾಲಿಟ್ಟು ಇಲ್ಲಿಯೂ ಗಬ್ಬೇಬ್ಬಿಸಿದೆ. ಪದವೀಧರರ ಬಗ್ಗೆ, ನೌಕರರ ಬಗ್ಗೆ, ನಿರುದ್ಯೋಗಿಗಳ ಬಗ್ಗೆ ಧ್ವನಿ ಎತ್ತಬೇಕಾದ ಜನ ಪ್ರತಿನಿಧಿಗಳಿಗೆ ಸಾಮಾಜಿಕ…

Read More