ಹೋರಿ ಬಿಟ್ಟು ಹರಕೆ ತೀರಿಸಿದ ದಡೆಸೂಗೂರು ಅಭಿಮಾನಿಗಳು

ದೇಣಿಗೆ ನೀಡಿ, ಚುನಾವಣೆ ಮಾಡಿದ್ದ ಶಾಸಕ ಬಸವರಾಜ ದಡೆಸುಗೂರ ಅಭಿಮಾನಿಗಳು, ಇದೀಗ ಕನಕಾಚಲಪತಿ ದೇವಸ್ಥಾನಕ್ಕೆ ಗೂಳಿ ಬಿಡುವ ಮೂಲಕ ಹರಕೆ ತೀರಿಸಿದ್ದಾರೆ. ಕೊಪ್ಪಳ ಜಿಲ್ಲೆ ಕನಕಗಿರಿ ವಿಧಾನಸಭೆ ಕ್ಷೇತ್ರದ ಶಾಸಕ ಬಸವರಾಜ ಚುನಾವಣೆಯಲ್ಲಿ ಆಯ್ಕೆಯಾಗಿದ್ದಕ್ಕೆ ಮರಾಠ ಸಮುದಾಯದವರು, ಗೂಳಿ ಬಿಡುವ ಮೂಲಕ ಹರಕೆ ತೀರಿಸಿದ್ದಾರೆ. ಚುನಾವಣೆಗೂ ಮೊದಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ ನೀಡಿದ್ದ ಕನಕಗಿರಿಯ ಕನಕಾಚಲಪತಿ ದೇವಸ್ಥಾನಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿ ಕಾಂಗ್ರೇಸ್ ಅಭ್ಯರ್ಥಿ ಗೆಲುವುಗಾಗಿ ಪೂಜೆ ಸಲ್ಲಿಸಿದ್ರು. ಆದ್ರೆ ಇದರ ಬೆನ್ನಲ್ಲೆ ನೂತನ ಶಾಸಕ ಬಸವರಾಜ್ ದಡೆಸೂಗೂರು ಅಭಿಮಾನಿಗಳು ನಮ್ಮ ಅಭ್ಯರ್ಥಿ ಗೆಲ್ಲಿಸಬೇಕು ಎಂದು ಹರೆಕೆ ಹೊತ್ತಿದ್ರು. ಇದರ ಫಲವಾಗಿ ಇಂದು ಅಭಿಮಾನಿಗಳು ದೇವಸ್ಥಾನಕ್ಕೆ ಹೋರಿ ಬಿಟ್ಟು ಹರಕೆ ತೀರಿಸಿದ್ರು. ಇನ್ನು ಈ ಭಾಗದ ಜನರ ಆರಾದ್ಯ ದೈವ. ಕನಕಾಚಲಪತಿಯ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊತ್ತು, ತಮ್ಮ ಇಷ್ಟಾರ್ಥ…

Read More