ಗವಿಮಠದಲ್ಲಿ ಅಕ್ಷರ ಅಭ್ಯಾಸ

ಮಕ್ಕಳು ಸುಶಿಕ್ಷಿತರಾಗ್ಲಿ ಅಂತ ಪಾಲಕರು ತಮ್ಮ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸ್ತಾರೆ..ಮೊದ್ಲ ಬಾರಿಗೆ ಶಾಲಾ ಮೆಟ್ಟಿಲೇರೋ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡ್ಸಿ ಮುಂದಿನ ಮಕ್ಕಳ ಶೈಕ್ಷಣಿಕ ಜೀವನ ಒಳ್ಳೆಯದಾಗ್ಲಿ ಅಂತ ಪಾಲಕರು ಬಯಸೋದು ಸಾಮಾನ್ಯ..ದೂರದ ಶೃಂಗೇರಿ ಹಾಗೂ ಪ್ರಸಿದ್ಧ ಕ್ಷೇತ್ರಗಳಿಗೆ ಹೋಗದ ಬಡಮಕ್ಕಳಿಗೆ ಕಳೆದ ಒಂಭತ್ತು ವರ್ಷಗಳಿಂದ ಸಾಮೂಹಿಕ ಅಕ್ಷರಾಭ್ಯಾಸ ಮಾಡಿಸೋ ಮೂಲಕ ಗವಿಮಠ ಮಾದರಿಯಾಗಿದೆ..‌ ಹೌದು….. ಅಕ್ಷರಾಭ್ಯಾಸ ಮಾಡ್ಸಲು ಮಕ್ಕಳೊಂದಿಗೆ ನೋಟ್ ಪುಸ್ತಕ, ಸ್ಲೇಟ್ ತಗೊಂಡು ಕುಳ್ತಿರೋ ಪಾಲಕರು… ಸಾಮೂಹಿಕವಾಗಿ ಅಕ್ಷರಾಭ್ಯಾಸ ಮಾಡ್ಸಿತಿರೋ ಸ್ವಾಮೀಜಿ.. ಕೊಪ್ಪಳದ ಗವಿಸಿದ್ದೇಶ್ವರ ಮಠದಲ್ಲಿ ಕಳೆದ ಒಂಭತ್ತು ವರ್ಷದಿಂದ ಮಠದ ಆಶ್ರಯದಲ್ಲಿ ಶೈಕ್ಷಣಿಕ ವರ್ಷ ಆರಂಭವಾಗೋ ಮುನ್ನ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡೋ ಕಾರ್ಯಕ್ರಮ ಆಯೋಜಿಸಲಾಗಿರುತ್ತೆ.. ಇಂದು ಗವಿಮಠದಲ್ಲಿ ಬೆಳಿಗ್ಗೆ 9 ಗಂಟೆಗೆ ಸರಸ್ವತಿ,ಗಾಯತ್ರಿಗೆ ವಿಶೇಷ ಪೂಜೆ ಮಾಡಿದ ಬಳಿಕ ಅಕ್ಷರಾಭ್ಯಾಸ ಮಾಡಿಸಿದ್ರು.. .ಜಾತಿ,ಮತ ಪಂಥವೆನ್ನದೆ ಎಲ್ಲಾ ಮಕ್ಕಳಿಗೆ ಸಾಮೂಹಿಕವಾಗಿ ಅಕ್ಷರಾಭ್ಯಾಸ ಮಾಡಿಸೋ ಮೂಲಕ ಕ್ರಾಂತಿಕಾರಕ…

Read More