ನಿಫಾ ವೈರಾಣು ಜ್ವರ ಹರಡುವಿಕೆ : ಸಾರ್ವಜನಿಕರಿಗೆ ಆರೋಗ್ಯ ಇಲಾಖೆಯ ಸಲಹೆ

ಕೊಪ್ಪಳ ಮೇ.: ನೀಫಾ ವೈರಾಣು ಜ್ವರ ಹರಡುವಿಕೆಯನ್ನು ತಡೆಗಟ್ಟಲು ಆರೋಗ್ಯ ಇಲಾಖೆಯ ವತಿಯಿಂದ ಸಾರ್ವಜನಿಕರಿಗೆ ಕೆಲ ಸಲಹೆಗಳನ್ನು ನೀಡಲಾಗಿದೆ. ನೀಫಾ ವೈರಾಣು ಜ್ವರಕ್ಕೆ ನೀಫಾ ಎನ್ಸಫಲೈಟೀಸ್ ಎಂದು ಹೆಸರಿಸಲಾಗಿದೆ. 1998 ರಲ್ಲಿ ಮಲೇಶಿಯಾ ಮತ್ತು ಸಿಂಗಪುರ ದೇಶಗಳಲ್ಲಿ ಮೊದಲ ಬಾರಿಗೆ ಕಂಡು ಬಂದಿದೆ. ಮಲೇಶಿಯಾದ ನೀಫಾ ಎಂಬ ಗ್ರಾಮದಲ್ಲಿ ಈ ವೈರಾಣುವನ್ನು ಪ್ರತ್ಯೇಕಿಸಿರುವುದರಿಂದ ಇದಕ್ಕೆ ನೀಫಾ ವೈರಾಣು ಜ್ವರ ಎಂದು ಹೆಸರಿಡಲಾಗಿದೆ. ಈ ಜ್ವರ ಬಾವಲಿ, ಹಂದಿ, ನಾಯಿ, ಕುರಿ, ಬೆಕ್ಕು ಹಾಗೂ ಮನುಷ್ಯರಿಗೆ ಭಾದಿಸುತ್ತದೆ. ಇದು ಮಲೇಶಿಯಾ, ಸಿಂಗಪುರ, ಭಾರತ ಮತ್ತು ಬಾಂಗ್ಲಾ ದೇಶಗಳಲ್ಲಿ ಕಾಣಿಸಿಕೊಂಡಿದೆ. ರೋಗದ ಲಕ್ಷಣಗಳು : ಜ್ವರ, ತಲೆ ನೋವು, ವಾಂತಿ, ತಲೆ ಸುತ್ತುವಿಕೆ ಬರುವುದು. ಪ್ರಜ್ಞಾಹೀನತೆಗೆ ಒಳಗಾಗುವುದು. ಅತೀಯಾದ ಜ್ವರ ಮೆದುಳಿಗೆ ವ್ಯಾಪಿಸುವುದು. ಮಾತುಗಳಲ್ಲಿ ತೊದಲುವಿಕೆ ಹಾಗೂ ಅಪಸ್ವರದ ಲಕ್ಷಣಗಳು ಕಾಣಿಸಿಕೊಳ್ಳುವುದು. ಕೆಲವು ಬಾರಿ ಸೂಕ್ತ ಚಿಕಿತ್ಸೆ ಲಭಿಸದಿದ್ದರೆ ಸಾವು…

Read More