ಕೊಪ್ಪಳ ಜಿಲ್ಲೆ : ಗೆದ್ದವರು , ಪಡೆದ ಮತಗಳು ,ಸೋತವರು -ಪಡೆದ ಮತಗಳು ಗೆಲುವಿನ ಅಂತರ Full Details

ರಾಜ್ಯವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕೊಪ್ಪಳ ಜಿಲ್ಲೆಯ ಘಟಾನುಘಟಿಗಳು ಸೋಲನ್ನು ಕಂಡಿದ್ದಾರೆ. ಕೊಪ್ಪಳ ಜಿಲ್ಲೆಯ ೫ ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರರಲ್ಲಿ ಬಿಜೆಪಿ ಗೆಲುವು ಕಂಡರೆ ಕಾಂಗ್ರೆಸ್ ಪಕ್ಷ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಕಂಡಿದೆ. ಕೊಪ್ಪಳ ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ನಾಳ ಸತತ ಎರಡನೇ ಬಾರಿ ಗೆಲುವಿನ ರುಚಿ ಕಂಡಿದ್ದಾರೆ. ಕೊಪ್ಪಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಘವೇಂದ್ರ ಹಿಟ್ನಾಳ ತಮ್ಮ ಸಮೀಪದ ಪ್ರತಿಸ್ಪಧಿ ಬಿಜೆಪಿ ಅಮರೇಶ ಸಂಗಣ್ಣ ಕರಡಿಯವರನ್ನು ೨೬೩೫೧ ಮತಗಳಿಂದ ಸೋಲಿಸಿದ್ದಾರೆ. ಕಾಂಗ್ರೆಸ್ ನ ರಾಘವೇಂದ್ರ ಹಿಟ್ನಾಳ ಒಟ್ಟು ೯೮೭೮೩ ಮತಗಳನ್ನು ಪಡೆದರೆ ಬಿಜೆಪಿ ಅಮರೇಶ ಕರಡಿ ೭೨07೨ ಮತಗಳನ್ನು ಪಡೆದಿದ್ದಾರೆ. ಜೆಡಿಎಸ್ ನ ಕೆ.ಎಂ.ಸಯ್ಯದ್ ೪೧೮೫ ಮತಗಳನ್ನು ಪಡೆದಿದ್ದಾರೆ. ಇಲ್ಲಿ ಕಳೆದ ಸಲ ಸಹ ರಾಘವೇಂದ್ರ ಹಿಟ್ನಾಳ ಕಾಂಗ್ರೆಸ್ ನಿಂದ ಆಯ್ಕೆಯಾಗಿದ್ದರು.  ಪ್ರದಾನಿ ನರೇಂಧ್ರ ಮೋದಿ ಈ ಭಾಗದಲ್ಲಿ ಪ್ರಚಾರದ ಮಾಡಿದ್ದೂ ಸಹ…

Read More