ವಿಧಾನಸಭಾ ಚುನಾವಣೆ: ಜಿಲ್ಲೆಯಲ್ಲಿ ಅಂದಾಜು ಶೇ. ೭೭ ರಷ್ಟು ಮತದಾನ

ಕೊಪ್ಪಳ ಮೇ.  ): ಕೊಪ್ಪಳ ಜಿಲ್ಲಾ ವ್ಯಾಪ್ತಿಯ ೦೫ ವಿಧಾನಸಭಾ ಕ್ಷೇತ್ರಗಳಲ್ಲಿ ಮೇ ೧೨ ರಂದು ನಡೆದ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಾಥಮಿಕ ವರದಿಗಳ ಪ್ರಕಾರ ಅಂದಾಜು ಒಟ್ಟು ಶೇ. ೭೭ ರಷ್ಟು ಮತದಾನವಾಗಿದೆ.  ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಅಂದಾಜು ಶೇ. ೭೪, ಕನಕಗಿರಿ- ಅಂದಾಜು ಶೇ. ೮೦ , ಗಂಗಾವತಿ-ಅಂದಾಜು ಶೇ. ೭೫ , ಯಲಬುರ್ಗಾ- ಅಂದಾಜು ಶೇ.೮೦, ಹಾಗೂ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಅಂದಾಜು ಶೇ.೭೫ ರಷ್ಟು ಮತದಾನವಾಗಿದೆ. ಮತದಾನದ ನಿಖರ ಪ್ರಮಾಣ ತಡರಾತ್ರಿ ಲಭ್ಯವಾಗುವ ಸಾಧ್ಯತೆ ಇದೆ. ಕೊಪ್ಪಳ ಜಿಲ್ಲೆಯಲ್ಲಿ ಬೆಳಗ್ಗೆ ೭ ಗಂಟೆಯಿಂದಲೇ ಪ್ರಾರಂಭಗೊಂಡ ಮತದಾನ, ಆರಂಭದಲ್ಲಿ ಮಂದಗತಿಯಿಂದ ಪ್ರಾರಂಭವಾದರೂ, ನಂತರದಲ್ಲಿ ವೇಗವನ್ನು ಪಡೆದುಕೊಂಡಿತು. ನೆತ್ತಿ ಸುಡುವಂತಿದ್ದ ಬಿರು ಬಿಸಿಲು ಮತದಾರರ ಮತದಾನದ ಉತ್ಸಾಹದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಬಿಸಿಲಿನ ತಾಪದ ನಡುವೆಯೂ ಮತದಾರರು ಮತಗಟ್ಟೆಗಳಲ್ಲಿ ಸರತಿ ಸಾಲಿನಲ್ಲಿ ನಿಂತು…

Read More